ಇಂಡಿಯನ್ ಪ್ರೀಮಿಯರ್ ಲೀಗ್ ರಿಟೈನ್ಶನ್ಗೂ ಮುನ್ನ ಆರ್ಸಿಬಿ ಗೊಂದಲದ ಗೂಡಾಗಿದೆ. ಒಂದೆಡೆ ಆಟಗಾರರ ರಿಟೈನ್-ರಿಲೀಸ್ ಲೆಕ್ಕಾಚಾರ, ಇನ್ನೊಂದೆಡೆ ಫ್ರಾಂಚೈಸಿ ಮಾರಾಟದ ತಲೆಬಿಸಿ, ಇದ್ರ ನಡುವೆ ಕೊಹ್ಲಿ ನಿವೃತ್ತಿ ವದಂತಿ ಮ್ಯಾನೇಜ್ಮೆಂಟ್ನ ಟೆನ್ಶನ್ ಹೆಚ್ಚಿಸಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ ರಿಟೈನ್ಶನ್ಗೂ ಮುನ್ನ ಆರ್ಸಿಬಿ ಗೊಂದಲದ ಗೂಡಾಗಿದೆ. ಒಂದೆಡೆ ಆಟಗಾರರ ರಿಟೈನ್-ರಿಲೀಸ್ ಲೆಕ್ಕಾಚಾರ, ಇನ್ನೊಂದೆಡೆ ಫ್ರಾಂಚೈಸಿ ಮಾರಾಟದ ತಲೆಬಿಸಿ, ಇದ್ರ ನಡುವೆ ಕೊಹ್ಲಿ ನಿವೃತ್ತಿ ವದಂತಿ ಮ್ಯಾನೇಜ್ಮೆಂಟ್ನ ಟೆನ್ಶನ್ ಹೆಚ್ಚಿಸಿದೆ. ಇದೀಗ ಕ್ಯಾಪ್ಟನ್ ರಜತ್ ಪಾಟಿದಾರ್ ಮ್ಯಾನೇಜ್ಮೆಂಟ್ ತಲೆನೋವನ್ನ ಮತ್ತಷ್ಟು ಹೆಚ್ಚಿಸಿದ್ದಾರೆ.

ಐಪಿಎಲ್ ರಿಟೈನ್ಶನ್ ಡೇಟ್ ಹತ್ತಿರವಾದ ಬೆನ್ನಲ್ಲೇ ಫ್ರಾಂಚೈಸಿಗಳ ವಲಯದಲ್ಲಿ ಭರದ ಚಟುವಟಿಕೆಗಳು ನಡೀತಿವೆ. ಆಟಗಾರರ ರಿಟೈನ್, ರಿಲೀಸ್, ಟ್ರೇಡಿಂಗ್ನ ಲೆಕ್ಕಾಚಾರಗಳು ಜೋರಾಗಿ ನಡೀತಿವೆ. ಆದ್ರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಮಾತ್ರ ಗೊಂದಲದ ಗೂಡಾಗಿದೆ. ಹಲವು ಟೆನ್ಶನ್ಗಳ ಮಧ್ಯೆ ಮತ್ತೊಂದು ಹೊಸ ಸಮಸ್ಯೆ ಮ್ಯಾನೇಜ್ಮೆಂಟ್ ತಲೆಬಿಸಿ ಹೆಚ್ಚಿಸಿದೆ.
ಬೆಂಗಳೂರಿಗೆ ಹೊಸ ಟೆನ್ಶನ್..!
ಹಾಲಿ ಚಾಂಪಿಯನ್ ಆರ್ಸಿಬಿ ಸದ್ಯ ಸಿಕ್ಕಾಪಟ್ಟೆ ಸುದ್ದಿಯಲ್ಲಿದೆ. ಒಂದು ಕಡೆ ಫ್ರಾಂಚೈಸಿ ಮಾರಾಟದ ಸುದ್ದಿಯಾದ್ರೆ, ಇನ್ನೊಂದು ಕಡೆಗೆ ವಿರಾಟ್ ಕೊಹ್ಲಿ ಐಪಿಎಲ್ಗೆ ಗುಡ್ ಬೈ ಹೇಳ್ತಾರೆ ಎಂಬ ಸುದ್ದಿ ಹಲ್ಚಲ್ ಎಬ್ಬಿಸಿದೆ. ಆರ್ಸಿಬಿ ಫ್ರಾಂಚೈಸಿಯಲ್ಲೂ ಈ ವಿಚಾರಗಳು ಗೊಂದಲಕ್ಕೆ ದಾರಿ ಮಾಡಿಕೊಟ್ಟಿವೆ. ಇದ್ರ ನಡುವೆ ಮತ್ತೊಂದು ಹೊಸ ಟೆನ್ಶನ್ ಆರ್ಸಿಬಿಯಲ್ಲಿ ತಲೆದೋರಿದೆ. ನಾಯಕನಾದ ಚೊಚ್ಚಲ ಸೀಸನ್ನಲ್ಲೇ ಕಪ್ ಗೆಲ್ಲಿಸಿಕೊಟ್ಟ ನಾಯಕ ರಜತ್ ಪಾಟಿದಾರ್ ಮ್ಯಾನೇಜ್ಮೆಂಟ್ ಟೆನ್ಶನ್ ಹೆಚ್ಚಿಸಿದ್ದಾರೆ.
ಸೌತ್ ಆಫ್ರಿಕಾ ಎ ಎದುರಿನ ಅನಧಿಕೃತ ಟೆಸ್ಟ್ನಲ್ಲಿ ಆರ್ಸಿಬಿ ನಾಯಕ ರಜತ್ ಪಾಟಿದಾರ್ ಇಂಜುರಿಗೆ ತುತ್ತಾಗಿದ್ದಾರೆ. ಮೊದಲ ಟೆಸ್ಟ್ ಅಂತ್ಯದ ಬಳಿಕ ರಜತ್ ಇಂಜುರಿಗೆ ತುತ್ತಾಗಿದ್ದು ಹೀಗಾಗಿಯೇ 2ನೇ ಟೆಸ್ಟ್ನಿಂದ ಹೊರಗುಳಿದಿದ್ರು. ಇದೀಗ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್ನಿಂದ ರಜತ್ ಇಂಜುರಿಯ ಲೇಟೆಸ್ಟ್ ಅಪ್ಡೇಟ್ ಹೊರಬಿದ್ದಿದೆ. ಇದ್ರ ಪ್ರಕಾರ ರಜತ್ ಚೇತರಿಸಿಕೊಳ್ಳಲು 4ರಿಂದ 5 ತಿಂಗಳು ಬೇಕಂತೆ. ಸುದೀರ್ಘ ಕಾಲ ರಜತ್ ಮೈದಾನದಿಂದ ಹೊರ ಬೀಳಲಿದ್ದಾರೆ. ಇದೇ ಆರ್ಸಿಬಿ ತಲೆಬಿಸಿಗೆ ಕಾರಣವಾಗಿರೋದು.
ಇಂಜುರಿಯಿಂದ ಚೇತರಿಕೆಗೆ 4ರಿಂದ 5 ತಿಂಗಳು ಬೇಕು.. ಅಂದ್ರೆ ಸಂಪೂರ್ಣ ಫಿಟ್ ಆಗಿ ಮೈದಾನಕ್ಕೆ ಮರಳಲು ಇನ್ನೂ ಹೆಚ್ಚಿನ ಸಮಯ ಬೇಕಾಗಲಿದೆ ಅನ್ನೋದು ಎನ್ಸಿಎ ಮೆಡಿಕಲ್ ಟೀಮ್ ಮೂಲಗಳ ಮಾಹಿತಿಯಾಗಿದೆ. ಮಾರ್ಚ್ನಲ್ಲಿ ಐಪಿಎಲ್ ಆರಂಭವಾಗಲಿದ್ದು, ಸದ್ಯದ ಮಾಹಿತಿ ಪ್ರಕಾರ ರಜತ್ ಫುಲ್ ಫಿಟ್ ಆಗಲು ಏಪ್ರಿಲ್ವರೆಗೆ ಸಮಯ ಬೇಕಾಗಬಹುದು ಎನ್ನಲಾಗ್ತಿದೆ. ಅಂದ್ರೆ ಐಪಿಎಲ್ ಮೊದಲಾರ್ಧಕ್ಕೆ ರಜತ್ ಪಾಟಿದಾರ್ ಅಲಭ್ಯರಾಗೋ ಸಾಧ್ಯತೆ ದಟ್ಟವಾಗಿದೆ.
ಆರ್ಸಿಬಿ ಮುನ್ನಡೆಸೋದ್ಯಾರು..?
ರಜತ್ ಪಾಟಿದಾರ್ ಅಲಭ್ಯತೆಯಿಂದ ಟೀಮ್ ಬ್ಯಾಲೆನ್ಸ್ ಡಿಸ್ಟರ್ಬ್ ಆಗೋ ಚಿಂತೆ ಒಂದೆಡೆಯಾದ್ರೆ, ತಂಡವನ್ನ ಮುನ್ನಡೆಸೋದ್ಯಾರು ಅನ್ನೋ ಪ್ರಶ್ನೆ ಮತ್ತೊಂದೆಡೆ ಕಾಡ್ತಿದೆ. ನಾಯಕನಾದ ಚೊಚ್ಚಲ ಸೀಸನ್ನಲ್ಲೇ ಕಪ್ ಗೆಲ್ಲಿಸಿ 18 ವರ್ಷದ ಕೊರಗನ್ನ ರಜತ್ ಪಾಟಿದಾರ್ ನೀಗಿಸಿದ್ರು. ಟೂರ್ನಿಯೂದ್ದಕ್ಕೂ ಬ್ರಿಲಿಯಂಟ್ ಕ್ಯಾಪ್ಟನ್ಸಿಯಿಂದ ಗಮನ ಸೆಳೆದಿದ್ರು. ಅಷ್ಟೇ ಸಮರ್ಥವಾಗಿ ತಂಡವನ್ನ ಮುನ್ನಡೆಸೋದ್ಯಾರು ಅನ್ನೋದು ಫ್ರಾಂಚೈಸಿಯಲ್ಲಿರೋ ದೊಡ್ಡ ಪ್ರಶ್ನೆಯಾಗಿದೆ. ಬಹುತೇಕ ವೈಸ್ ಕ್ಯಾಪ್ಟನ್ ಜಿತೇಶ್ ಶರ್ಮಾಗೆ ನಾಯಕತ್ವದ ಜವಾಬ್ಧಾರಿ ನೀಡೋ ಸಾಧ್ಯತೆಯಿದೆ.
ಒಟ್ಟಿನಲ್ಲಿ ಫ್ರಾಂಚೈಸಿಯ ಮಾರಾಟ, ವಿರಾಟ್ ಕೊಹ್ಲಿ ನಿವೃತ್ತಿ ಸುದ್ದಿ, ರಿಟೈನ್-ರಿಲೀಸ್ ಲೆಕ್ಕಾಚಾರದ ನಡುವೆ ರಜತ್ ಪಾಟಿದಾರ್ ಇಂಜುರಿ ಆರ್ಸಿಬಿಗೆ ಹೊಸ ಟೆನ್ಶನ್ ತಂದಿಟ್ಟಿದೆ. ಫ್ರಾಂಚೈಸಿಯನ್ನೇ ಮಾರಾಟ ಮಾಡ್ತಿರೋದ್ರಿಂದ ಟೆನ್ಶನ್ ಯಾಕೆ ಅನ್ನೋದು ನಿಮ್ಮ ಪ್ರಶ್ನೆ ಇರಬಹುದು. ಕೊಹ್ಲಿ ನಿವೃತ್ತಿಯಾದ್ರೆ, ನಾಯಕ ರಜತ್ ಪಾಟಿದಾರ್ ಅಲಭ್ಯರಾದ್ರೆ ಆರ್ಸಿಬಿ ಬ್ರ್ಯಾಂಡ್ವ್ಯಾಲ್ಯೂ ಕುಸಿಯದೇ ಇರುತ್ತಾ.?
Have any thoughts?
Share your reaction or leave a quick response — we’d love to hear what you think!