Home Internationalಇದು ಆಪಲ್‌ ಕಂಪನಿಯ ತಾಕತ್ತು: 3 ದಿನ ಮಣ್ಣಿನಲ್ಲಿ ಹೂತುಹೋಗಿದ್ರೂ ಕೆಲಸ ಮಾಡ್ತಿದೆ ಐಫೋನ್ 17 ಪ್ರೊ

ಇದು ಆಪಲ್‌ ಕಂಪನಿಯ ತಾಕತ್ತು: 3 ದಿನ ಮಣ್ಣಿನಲ್ಲಿ ಹೂತುಹೋಗಿದ್ರೂ ಕೆಲಸ ಮಾಡ್ತಿದೆ ಐಫೋನ್ 17 ಪ್ರೊ

by shiv
0 comments

ಫಿಲಿಪೈನ್ಸ್‌ನಲ್ಲಿ ಭೀಕರ ಚಂಡಮಾರುತದ ನಡುವೆಯೂ, ಮಣ್ಣಿನಲ್ಲಿ ಹೂತುಹೋಗಿದ್ದ ಐಫೋನ್ 17 ಪ್ರೊ ಮತ್ತೆ ಕೆಲಸ ಮಾಡಿದೆ. ತಮ್ಮ ಐಫೋನ್ ಬದುಕುಳಿದ ಬಗ್ಗೆ ಚಂಡಮಾರುತದಿಂದ ಪಾರಾದ ವ್ಯಕ್ತಿಯೊಬ್ಬರು ರೆಡ್ಡಿಟ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ಘಟನೆ ವೈರಲ್ ಆಗಿದ್ದು, ಆಪಲ್‌ನ ಬಾಳಿಕೆಯನ್ನು ನೆಟ್ಟಿಗರು ಶ್ಲಾಘಿಸಿದ್ದಾರೆ. ಚಂಡಮಾರುತದ ಅನಾಹುತಗಳ ನಡುವೆ ಈ ಐಫೋನ್ ಕೆಲಸ ಮಾಡಿರುವುದು ಪವಾಡ ಎಂದು ಹಲವು ಜನ ಕಮೆಂಟ್​​ ಮಾಡಿದ್ದಾರೆ.

ಫಿಲಿಪೈನ್ಸ್‌ನಲ್ಲಿ (Philippines) ಭಾರೀ ಚಂಡಮಾರುತ ಉಂಟಾಗಿ ಮೂಕಸೌಕರ್ಯಗಳು ನಾಶವಾಗಿದೆಹಲವು ಜನ ಸಾವನ್ನಪ್ಪಿದ್ದಾರೆಆದರೆ ಇದರ ನಡುವೆ ಚಂಡಮಾರುತಕ್ಕೆ ತಂತ್ರಜ್ಞಾನವೊಂದು ಸೆಡ್ಡು ಹೊಡೆದು ನಿಂತಿದೆಇದೀಗ  ಘಟನೆ ಭಾರೀ ವೈರಲ್​​ ಆಗಿದೆವಿನಾಶಕಾರಿ ಚಂಡಮಾರುತದಿಂದ ಬದುಕುಳಿದ ವ್ಯಕ್ತಿಯೊಬ್ಬರ ಐಫೋನ್ 17 ಪ್ರೊ (iPhone 17 Pro) ಮಣ್ಣಿನಲ್ಲಿ ಹೂತುಹೋಗಿದ್ದರೂ ಮತ್ತೆ ಅದು ಕೆಲಸ ಮಾಡುತ್ತಿದೆಇದನ್ನು ಅವರು ರೆಡ್ಡಿಟರ್​​ನಲ್ಲಿ ಹಂಚಿಕೊಂಡಿದ್ದುನೆಟ್ಟಗರು ಆಪಲ್‌ ಕಂಪನಿಯನ್ನು ಶ್ಲಾಘಿಸಿದ್ದಾರೆ. ಭಾರೀ ಚಂಡಮಾರುತದಿಂದ ಫಿಲಿಪೈನ್ಸ್‌ ತತ್ತರಿಸಿ ಹೋಗಿದೆಮೂಲಸೌಕರ್ಯಗಳು ನಾಶವಾಗಿದ್ದರು ಐಫೋನ್ 17 ಪ್ರೊ ವರ್ಕ್​​ ಮಾಡುತ್ತಿದೆ ಎಂದರೆ ನಂಬಲು ಸಾಧ್ಯವೇ ಎಂದು ನೆಟ್ಟಿಗರು ಕಮೆಂಟ್​​ ಮಾಡಿದ್ದಾರೆ.

ಚಂಡಮಾರುತದಿಂದ ಬದುಕುಳಿದ ವ್ಯಕ್ತಿ ರೆಡ್ಡಿಟರ್​​ನಲ್ಲಿ  ಬಗ್ಗೆ ವಿವರಿಸಿದ್ದಾರೆ. ” ಫಿಲಿಪೈನ್ಸ್‌ ಚಂಡಮಾರುತದಿಂದ ಎಲ್ಲವನ್ನು ಕಳೆದುಕೊಂಡಿದೆಜನರು ತಮ್ಮವರನ್ನು ಕಳೆದುಕೊಂಡು ಕಣ್ಣೀರು ಹಾಕುತ್ತಿದ್ದಾರೆ

ಸುಂದರ ಜೀವನ ನಡೆಸುತ್ತಿದ್ದ ಅದೆಷ್ಟೋ ಜೀವಗಳು ಮಣ್ಣು ಸೇರಿದೆನಾನು ಕೂಡ  ಚಂಡಮಾರುತದಿಂದ ನನ್ನ ಕುಟುಂಬದ ಸದಸ್ಯರನ್ನು ಕಳೆದುಕೊಂಡಿದ್ದೇನೆ

ಚಂಡಮಾರುತದಿಂದ ನನ್ನ ಮನೆಯೊಳಗೆ ನೀರು ಬಂದು ಮುಳುಗಿ ಹೋಗಿದೆ.

 ಇದರಿಂದ ತಪ್ಪಿಸಿಕೊಳ್ಳಲು ಮನೆಯ ಛಾವಣಿ ಮೇಲೆ ಏರಬೇಕಾದ ಪರಿಸ್ಥಿತಿ ಬಂತು ವೇಳೆ ಕಾಲು ಜಾರಿ ಛಾವಣಿಯಿಂದ ನೀರಿಗೆ ಬಿದ್ದೆ, 15 ನಿಮಿಷಗಳ ಕಾಲ ನೀರಿನಲ್ಲಿ ಒದ್ದಾಡಿಹೇಗೋ ಮೇಲೆ ಬಂದೆಆದರೆ  ವೇಳೆ ನನ್ನ ಕೈಯಲ್ಲಿದ್ದ ಐಫೋನ್ 17 ಪ್ರೊ ನೀರಿಗೆ ಬಿದ್ದಿದೆಫೋನ್​​​​ ನೀರಿಗೆ ಬಿದ್ದದ್ದು ನನಗೆ ಗೊತ್ತೆ ಆಗಿಲ್ಲ. 3 ದಿನಗಳ ನಂತರ ನನ್ನ ಮನೆ ಬಳಿ ಹೋದೇ ಎಲ್ಲವೂ ನೀರು ಪಾಲಾಗಿತ್ತುಆದರೆ ಮನೆಯ ಒಂದು ಮೂಲೆಯಲ್ಲಿ ನನ್ನ ಐಫೋನ್ 17 ಪ್ರೊ ಮಣ್ಣಿನಲ್ಲಿ ಅರ್ಧ ಹೂತುಹೋಗಿತ್ತುಅದನ್ನು ಸ್ವಲ್ಪ ಸ್ವಚ್ಛ ಮಾಡಿಚಾರ್ಜ್​​​ಗೆ ಹಾಕಿದೆತಕ್ಷಣ ಅದು ಆನ್ ಆಯಿತು. ಯಾವುದೇ ಗೀರುಗಳಿಲ್ಲ, ಯಾವುದೇ ಸಮಸ್ಯೆಗಳಿಲ್ಲ” ಎಂದು ಹೇಳಿದ್ದಾರೆ.

ಆಪಲ್‌ ಕಂಪನಿಯನ್ನು ಶ್ಲಾಘಿಸಿದ ನೆಟ್ಟಿಗರು:

ನಿಮ್ಮ ಫೋನ್​​​​​​​ ಅದ್ಭುತವಾಗಿದೆಮತ್ತೆ ವರ್ಕ್​​ ಮಾಡುತ್ತಿದೆ ಎಂದರೆ ಅಚ್ಚರಿ ಪಡುವ ಸಂಗತಿ ಎಂದು ಒಬ್ಬರು ಹೇಳಿದ್ದಾರೆಮೊಬೈಲ್ ಫೋನ್‌ಗಳು ಬಾಳಿಕೆಯ ವಿಷಯದಲ್ಲಿ ಎಷ್ಟು ಮುಂದುವರೆದಿವೆ ಎಂಬುದು ಇದರಲ್ಲಿ ಅರ್ಥವಾಗುತ್ತದೆ ಎಂದು ಮತ್ತೊಬ್ಬರು ಹೇಳಿದ್ದಾರೆಇತ್ತಿಚೇಗಿನ ದಿನಗಳಲ್ಲಿ ಎಲೆಕ್ಟ್ರಾನಿಕ್ ಸಾಧನಗಳು ಹೆಚ್ಚು ಬಾಳಿಕೆ ಹಾಗೂ ನಂಬಿಕೆಯನ್ನು ಉಳಿಸಿಕೊಂಡಿಲ್ಲಆದರೆ ಐಫೋನ್ 17 ಪ್ರೊ ತುಂಬಾ ಅದ್ಭುತವಾಗಿದೆ ಎಂದು ಮತ್ತೊಬ್ಬ ನೆಟ್ಟಿಗ ಹೇಳಿದ್ದಾರೆ.

Have any thoughts?

Share your reaction or leave a quick response — we’d love to hear what you think!

You may also like