Home Entertainmentಒಟಿಟಿಗೆ ಬಂತು ಕನ್ನಡದ ಹಿಟ್ ಚಿತ್ರ ‘ಎಕ್ಕ’; ಎಲ್ಲಿ ವೀಕ್ಷಿಸಬಹುದು?

ಒಟಿಟಿಗೆ ಬಂತು ಕನ್ನಡದ ಹಿಟ್ ಚಿತ್ರ ‘ಎಕ್ಕ’; ಎಲ್ಲಿ ವೀಕ್ಷಿಸಬಹುದು?

by shiv
0 comments

ಯುವ ರಾಜ್​ಕುಮಾರ್ ನಟನೆಯ ‘ಎಕ್ಕ’ ಕನ್ನಡ ಸಿನಿಮಾ ಈಗ ಸನ್​ NXT​ ಒಟಿಟಿಯಲ್ಲಿ ವೀಕ್ಷಣೆಗೆ ಲಭ್ಯವಿದೆ. ಥಿಯೇಟರ್ ಬಿಡುಗಡೆಯಾದ ನಾಲ್ಕು ತಿಂಗಳ ನಂತರ ‘ಎಕ್ಕ’ ಒಟಿಟಿಗೆ ಎಂಟ್ರಿ ಕೊಟ್ಟಿದೆ. ಕನ್ನಡ ಸಿನಿಮಾ ಒಟಿಟಿಗೆ ಬರುವುದು ಕಡಿಮೆ. ಹೀಗಾಗಿ ಅಭಿಮಾನಿಗಳಿಗೆ ಸಿನಿಮಾ ಒಟಿಟಿಗೆ ಬಂದಿದ್ದು ಖುಷಿ ಕೊಟ್ಟಿದೆ.

ವೀಕೆಂಡ್ ಬಂತು ಎಂದರೆ ಒಟಿಟಿಯಲ್ಲಿ ಯಾವುದಾದರೂ ಒಳ್ಳೆಯ ಸಿನಿಮಾ ಒಟಿಟಿಯಲ್ಲಿ ವೀಕ್ಷಣೆಗೆ ಸಿಗಬಹುದೇ ಎಂದು ನೋಡುತ್ತಾರೆ. ಪ್ರತಿ ವಾರ ಸಾಕಷ್ಟು ಸಿನಿಮಾಗಳು ಹಾಗು ವೆಬ್ ಸೀರಿಸ್​ಗಳು ಬಿಡುಗಡೆ ಆಗುತ್ತವೆ ನಿಜ. ಆದರೆ, ಕನ್ನಡ ಭಾಷೆಯ ಸಿನಿಮಾಗಳು ಒಟಿಟಿಗೆ ಬರೋದು ತುಂಬಾನೇ ಕಡಿಮೆ. ಈ ವಾರ ಕನ್ನಡದ್ದೇ ಸಿನಿಮಾ ರಿಲೀಸ್ ಆಗಿದೆ. ಅದು ಬೇರೆ ಯಾವುದೂ ಅಲ್ಲ ಯುವ ರಾಜ್​ಕುಮಾರ್ ನಟನೆಯ ‘ಎಕ್ಕ’.

‘ಎಕ್ಕ’ ಸಿನಿಮಾ ಥಿಯೇಟರ್​ನಲ್ಲಿ ರಿಲೀಸ್ ಆಗಿದ್ದು ಜುಲೈ 18ರಂದು. ಈ ಸಿನಿಮಾಗೆ ಯುವ ರಾಜ್​ಕುಮಾರ್ ಹೀರೋ ಆದರೆ, ಸಂಜನಾ ಆನಂದ್ ನಾಯಕಿ. ರೋಹಿತ್ ಪದಕಿ ಅವರು ಈ ಚಿತ್ರ ನಿರ್ದೇಶನ ಮಾಡಿದ್ದರು. ಈ ಸಿನಿಮಾ ಒಳ್ಳೆಯ ಓಪನಿಂಗ್ ಪಡೆಯಿತು. ಈ ಸಿನಿಮಾ ಒಟಿಟಿಗೆ ಇನ್ನೂ ಕಾಲಿಟ್ಟಿರಲಿಲ್ಲ. ಈಗ ಸಿನಿಮಾ ರಿಲೀಸ್ ಆದ ಸುಮಾರು ನಾಲ್ಕು ತಿಂಗಳ ಬಳಿಕ ಒಟಿಟಿಗೆ ಬಂದಿದೆ.

‘ಎಕ್ಕ’ ಸಿನಿಮಾ ಸನ್​ NXT​ ಒಟಿಟಿ ಮೂಲಕ ಪ್ರಸಾರ ಆರಂಭಿಸಿದೆ. ಸಾಮಾನ್ಯವಾಗಿ ಜೀ5, ಅಮೇಜಾನ್ ಪ್ರೈಮ್ ವಿಡಿಯೋ ಸಬ್​ಸ್ಕ್ರಿಪ್ಶನ್ ಅನೇಕರ ಬಳಿ ಇರುತ್ತವೆ. ಆದರೆ, ಸನ್​ NXT​ ಸಬ್​ಸ್ಕ್ರಿಪ್ಶನ್ ಹೊಂದಿರುವವರು ಕಡಿಮೆ. ಹೀಗಾಗಿ, ‘ಎಕ್ಕ’ ಸಿನಿಮಾನ ಈ ಒಟಿಟಿ ಮೂಲಕ ಪ್ರಸಾರ ಮಾಡಿದ್ದು ಅನೇಕರಿಗೆ ಬೇಸರ ಇದೆ. ಈ ಮೊದಲು ‘ಎಕ್ಕ’ ಸಿನಿಮಾ ಜೀ5 ಅಲ್ಲಿ ಬರುತ್ತದೆ ಎಂದು ಹೇಳಲಾಗಿತ್ತು.‘ಎಕ್ಕ’ ಚಿತ್ರವನ್ನು ಅಶ್ವಿನಿ ಪುನೀತ್ ರಾಜ್​ಕುಮಾರ್, ಜಯಣ್ಣ-ಭೋಗೇಂದ್ರ, ಕಾರ್ತಿ ಗೌಡ ಹಾಗೂ ಯೋಗಿ ರಾಜ್ ಅವರು ನಿರ್ಮಾಣ ಮಾಡಿದ್ದಾರೆ. ಈ ಸಿನಿಮಾದ ಥೀಮ್ ಪುನೀತ್ ಅವರ ‘ಜಾಕಿ’ ಸಿನಿಮಾಗೆ ಅನೇಕರು ಹೋಲಿಕೆ ಮಾಡಿದ್ದರು. ಈ ಚಿತ್ರದ ಮೂಲಕ ಯುವ ಸಾಕಷ್ಟು ಜನಪ್ರಿಯತೆ ಪಡೆದರು.

Have any thoughts?

Share your reaction or leave a quick response — we’d love to hear what you think!

You may also like