ಚಿಕಿತ್ಸೆ ಫಲಕಾರಿಯಾಗದೆ ಸಂದೀಪ್ ಅವರು ಆಸ್ಪತ್ರೆಯಲ್ಲೇ ಉಸಿರು ಚೆಲ್ಲಿದ್ದಾರೆ. ಮಾರಿಕಾಂಬ ದೇವಸ್ಥಾನದ ಹಿಂಭಾಗ ರಸ್ತೆಯ ನಿವಾಸಿಯಾದ ಸಂದೀಪ್ ಅವರು ಸಹೋದರರು ಸಂದೀಪ್ ಕುಟುಂಬಕ್ಕೆ ಸರ್ಕಾರದಿಂದ ಸಹಾಯ ಧನ ನೀಡಬೇಕು ಎಂದು ಮನವಿ ಮಾಡಿದ್ದಾರೆ.

ಶಿವಮೊಗ್ಗ: ಕರ್ತವ್ಯ ನಿರತ ಕೆಎಸ್ಆರ್ಟಿಸಿ ನೌಕರರೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಸಾಗರ ನಗರದಲ್ಲಿರುವ ಇಲಾಖೆಯ ಡಿಪೋದಲ್ಲಿ ನಡೆದಿದೆ. ಜಿಲ್ಲೆಯ ಸಾಗರ ನಗರದಲ್ಲಿ ಇರುವ ಕೆಎಸ್ಆರ್ಟಿಸಿ ಬಸ್ ಚಾಲಕ ಸಂದೀಪ್ (41) ಕರ್ತವ್ಯ ನಿರ್ವಹಿಸುತ್ತಿರುವ ಸಂದರ್ಭದಲ್ಲಿ ಎದೆ ನೋವು ಕಾಣಿಸಿಕೊಂಡು ಸ್ಥಳದಲ್ಲೇ ಕುಸಿದು ಬಿದ್ದು ಮೃತಪಟ್ಟಿದ್ದಾರೆ.

ತಕ್ಷಣ ಅಲ್ಲೇ ಇದ್ದ ಸಹೋದ್ಯೋಗಿಗಳು ಸುಂದೀಪ್ರನ್ನು ಕೆಎಸ್ಆರ್ಟಿಸಿ ಬಸ್ಸಿನಲ್ಲಿಯೇ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಂದೀಪ್ ಅವರು ಆಸ್ಪತ್ರೆಯಲ್ಲೇ ಹೃದಯಾಘಾತದಿಂದ ಉಸಿರು ಚೆಲ್ಲಿದ್ದಾರೆ. ಮಾರಿಕಾಂಬ ದೇವಸ್ಥಾನದ ಹಿಂಭಾಗ ರಸ್ತೆಯ ನಿವಾಸಿಯಾದ ಸಂದೀಪ್ ಅವರು ಸಹೋದರರು ಸಂದೀಪ್ ಕುಟುಂಬಕ್ಕೆ ಸರ್ಕಾರದಿಂದ ಸಹಾಯ ಧನ ನೀಡಬೇಕು ಎಂದು ಮನವಿ ಮಾಡಿದ್ದಾರೆ.
Have any thoughts?
Share your reaction or leave a quick response — we’d love to hear what you think!