Home Latest Newsದಿನಕ್ಕೆ 14 ಗಂಟೆ ದುಡಿದ್ರೂ ಮಧ್ಯರಾತ್ರಿ ಫೋನ್​​ ಮಾಡಿ ಕಿರುಕುಳ ನೀಡಿದ ಮ್ಯಾನೇಜರ್‌

ದಿನಕ್ಕೆ 14 ಗಂಟೆ ದುಡಿದ್ರೂ ಮಧ್ಯರಾತ್ರಿ ಫೋನ್​​ ಮಾಡಿ ಕಿರುಕುಳ ನೀಡಿದ ಮ್ಯಾನೇಜರ್‌

by shiv
0 comments

ಕೆಲಸದ ಸ್ಥಳದಲ್ಲಿ ಮ್ಯಾನೇಜರ್‌ನಿಂದ ಮಹಿಳೆಗೆ ಆದ ಕಿರುಕುಳದ ಬಗ್ಗೆ ಪೋಸ್ಟ್​​ವೊಂದು ವೈರಲ್ ಆಗಿದೆ. 14 ಗಂಟೆಗಳ ಕಾಲ ಕೆಲಸ ಮಾಡಿದ ನಂತರವೂ ರಾತ್ರಿ 2.45ಕ್ಕೆ ಮೆಸೇಜ್ ಮಾಡಿ ತೊಂದರೆ ನೀಡಿದ್ದು, ಉತ್ತರಿಸದಿದ್ದಕ್ಕೆ ಬಾಯಿಗೆ ಬಂದಂತೆ ಬೈದಿದ್ದಾರೆ. ಇದು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಿದ್ದು, ಇಂತಹ ಘಟನೆಗಳು ಕೆಲಸದ ವಾತಾವರಣವನ್ನು ಕೆಡಿಸುತ್ತವೆ ಎಂದು ಮಹಿಳೆ ಹೇಳಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಕೆಲಸದ ಅವಧಿಯ ಬಗ್ಗೆ ಪ್ರತಿದಿನ ಚರ್ಚೆಗಳು ನಡೆಯುತ್ತ ಇರುತ್ತದೆಇದೀಗ ಇಲ್ಲೊಂದು ಪೋಸ್ಟ್​​​ ಭಾರೀ ಚರ್ಚೆಗೆ ಕಾರಣವಾಗಿದೆ24 ವರ್ಷದ ಮಹಿಳೆಯೊಬ್ಬರು ತಮ್ಮ ಕೆಲಸ ಸ್ಥಳದಲ್ಲಿ ನಡೆದ ಕೆಟ್ಟ ಅನುಭವದ (workplace harassment) ಬಗ್ಗೆ ಹಂಚಿಕೊಂಡಿದ್ದಾರೆಟೀಮ್​​​​ ಮ್ಯಾನೇಜರ್​​​ 14 ಗಂಟೆ ಕೆಲಸ ಮಾಡಿದ ನಂತರವೂ ಬೆಳಗಿನ ಜಾವ 2.45ಕ್ಕೆ ಮತ್ತೆ ಮೆಸೇಜ್​ ಮಾಡಿ ಕಾಟ ನೀಡಿದ್ದಾರೆ ಎಂದು  ಪೋಸ್ಟ್​​​ನಲ್ಲಿ ಹಂಚಿಕೊಂಡಿದ್ದಾರೆಕಂಪನಿಗಳಲ್ಲಿ ಆಗುವ ಇಂಥಹ ಘಟನೆಗಳಿಗೆ ನೆಟ್ಟಿಗರು ಕೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ ಪೋಸ್ಟ್​​ನ್ನು ಮಹಿಳೆ ರೆಡ್ಡಿಟ್​​​ನಲ್ಲಿ ಹಂಚಿಕೊಂಡಿದ್ದಾರೆ.

 ರೀತಿಯ ಧೋರಣೆಗಳು ಕೆಲಸದ ಮೇಲೆ ಕೆಟ್ಟ ಪರಿಣಾಮವನ್ನು ಉಂಟು ಮಾಡುತ್ತದೆ ಹಾಗೂ ಮಾನಸಿಕ ಹಾನಿಯನ್ನು ಉಂಟು ಮಾಡುತ್ತದೆ ಎಂದು ಮಹಿಳೆ ಹೇಳಿದ್ದಾರೆ

ಮಹಿಳೆ ಪೋಸ್ಟ್​​​ನಲ್ಲಿ ಹೀಗೆ ಹಂಚಿಕೊಂಡಿದ್ದಾರೆ. “ಕಳೆದ ಎರಡು ವಾರಗಳಿಂದ ನಾನು 14 ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದೇನೆಶನಿವಾರಭಾನುವಾರ ಕೂಡ ಕೆಲಸ ಮಾಡಿದ್ದಾನೆಅದ್ರೂ ನನ್ನ ಮ್ಯಾನೇಜರ್​​​ಗೆ ತೃಪ್ತಿ ಇಲ್ಲಬೆಳಿಗ್ಗೆ 2:45 ಕ್ಕೆ ಮೆಸೇಜ್ ಮಾಡಿಕೆಲಸದ ಬಗ್ಗೆ ಅಪ್ಡೇಟ್​​​ ಕೇಳಿದ್ದಾರೆಇದಕ್ಕೆ ನೀವು ಈಗಲೇ ಉತ್ತರಿಸಿ ಎಂದು ಹೇಳಿದ್ದಾರೆಆದರೆ ನಾನು ಆಗ ನಿದ್ರೆ ಮಾಡುತ್ತಿದ್ದ ಕಾರಣಅವರ ಮೆಸೇಜ್​​ಗೆ​​ ಉತ್ತರಿಸಿಲ್ಲ ಕೋಪಕ್ಕೆ ಅವರು ನನ್ನನ್ನು ಬಾಯಿಗೆ ಬಂದಂತೆ ಬೈದಿದ್ದಾರೆಜತೆಗೆ ನಾನೇ ಕ್ಷಮೆ ಕೇಳಬೇಕು ಎಂದು ಅಹಂಕಾರದಲ್ಲಿ ಮಾತನಾಡಿದ್ದಾರೆ.” ಎಂದು ಹೇಳಿದ್ದಾರೆ.ಮಹಿಳೆ ಮ್ಯಾನೇಜರ್​​ ಬಗ್ಗೆ ಕಂಪನಿಯ ಉತನ್ನ ಅಧಿಕಾರಿಗಳಿಗೆ ದೂರು ನೀಡಿದ್ರೂ ಯಾವುದೇ ಪ್ರಯೋಜನ ಆಗಿಲ್ಲಯಾಕೆಂದರೆ ಮ್ಯಾನೇಜರ್​​​ ಪ್ರಭಾವಿ ಸ್ಥಾನದಲ್ಲಿ ಇರುವ ಕಾರಣ ಅಲ್ಲಿ ಯಾವ ದೂರಿಗೂ ಬೆಲೆ ಇರಲಿಲ್ಲ ರೀತಿಯ ಧೋರಣೆಗಳು ಮಾಸಿನಕವಾಗಿ ಕುಗ್ಗಿಸುತ್ತದೆ ಎಂದು ಮಹಿಳೆ ಹೇಳಿದ್ದಾರೆ

ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಕೂಡ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ ಮ್ಯಾನೇಜರ್​​ ಈಗಲೇ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.ಇಲ್ಲೊಬ್ಬರು ತಮ್ಮ ಕೆಲಸದ ಸ್ಥಳದಲ್ಲಾದ ಕಹಿ ಅನುಭವವನ್ನು ಈ ಪೋಸ್ಟ್​ನ ಕೆಳಗೆ ಹಂಚಿಕೊಂಡಿದ್ದಾರೆ. “ನನ್ನ ಕಂಪನಿಗಳಲ್ಲೂ ಇಂತಹ ಘಟನೆ ನಡೆದಿತ್ತುಕಂಪನಿಯಲ್ಲಿ ನನಗೆ ಆಗುವ ಸಮಸ್ಯೆಗಳ ಬಗ್ಗೆ ಪ್ರಾಜೆಕ್ಟ್ ಮ್ಯಾನೇಜರ್​​​ಗೆ ದೂರು ನೀಡಿದೆಆದರೆ ಯಾವುದೇ ಪ್ರಯೋಜನ ಆಗಿಲ್ಲನಂತರ HR ಗೆ ದೂರು ನೀಡಿದೆಅಲ್ಲೂ ಯಾವುದೇ ಪರಿಹಾರ ಸಿಕ್ಕಿಲ್ಲನಂತರ ಮುಂಬೈ ಹೆಡ್​​​ ಆಫೀಸ್​​​ಗೆ ದೂರು ನೀಡಿದೆಮುಂಬೈ ಹೆಡ್​​​ ಆಫೀಸ್​​​ನಿಂದ ನನಗೆ ಒಂದು ಇಮೇಲ್​​ ಬಂತುಸ್ವಲ್ಪ ದಿನ ಕಾಯಿರಿಎಲ್ಲವನ್ನು ಸರಿ ಮಾಡುವ ಎಂದು ಹೇಳಿದ್ರುಆದರೆ ನನ್ನ ತಂಡವನ್ನೇ ಬದಲಾವಣೆ ಮಾಡುವಂತೆ ಒತ್ತಾಯಿಸಿದ್ರುಅದನ್ನು ಕೂಡ ಮಾಡಿದೆ

ಕೊನೆಗೆ ಅಲ್ಲಿ ಕೆಲಸ ಮಾಡಲು ಸಾಧ್ಯವಾಗದೆನಾನು ರಾಜೀನಾಮೆ ನೀಡಿ ಹೊರ ಬಂದೆ” ಎಂದು ಹೇಳಿಕೊಂಡಿದ್ದಾರೆ.

Have any thoughts?

Share your reaction or leave a quick response — we’d love to hear what you think!

You may also like