Home Entertainmentನಯನತಾರಾ ಜನ್ಮದಿನಕ್ಕೆ 10 ಕೋಟಿ ರೂಪಾಯಿ ಎಲೆಕ್ಟ್ರಿಕ್​ ಕಾರು ಗಿಫ್ಟ್ ಕೊಟ್ಟ ವಿಘ್ನೇಶ್

ನಯನತಾರಾ ಜನ್ಮದಿನಕ್ಕೆ 10 ಕೋಟಿ ರೂಪಾಯಿ ಎಲೆಕ್ಟ್ರಿಕ್​ ಕಾರು ಗಿಫ್ಟ್ ಕೊಟ್ಟ ವಿಘ್ನೇಶ್

by shiv
0 comments

ನಟಿ ನಯನತಾರಾ ಜನ್ಮದಿನಕ್ಕೆ ಪತಿ ವಿಘ್ನೇಶ್ ಶಿವನ್ 10 ಕೋಟಿ ರೂಪಾಯಿ ಬೆಲೆಯ ರೋಲ್ಸ್ ರಾಯ್ಸ್ ಎಲೆಕ್ಟ್ರಿಕ್ ಕಾರು ಉಡುಗೊರೆಯಾಗಿ ನೀಡಿದ್ದಾರೆ. ಇದು ಕಂಪನಿಯ ಮೊದಲ ಎಲೆಕ್ಟ್ರಿಕ್ ಕಾರಾಗಿದ್ದು, 530 ಕಿ.ಮೀ.ವರೆಗೆ ಚಲಿಸುತ್ತದೆ. ಕೇವಲ 20 ನಿಮಿಷಗಳಲ್ಲಿ 80% ಚಾರ್ಜ್ ಆಗುತ್ತದೆ. ನಯನತಾರಾ, ವಿಘ್ನೇಶ್ ಮತ್ತು ಮಕ್ಕಳು ಕಾರಿನೊಂದಿಗೆ ಪೋಸ್ ನೀಡಿದ್ದು, ಈ ಐಷಾರಾಮಿ ಕಾಣಿಕೆ ಸಖತ್ ಸುದ್ದಿಯಾಗಿದೆ.

ನಟಿ ನಯನತಾರಾ ಅವರು ನವೆಂಬರ್ 18ರಂದು ಬರ್ತ್​ಡೇ ಆಚರಿಸಿಕೊಂಡರು. ಈ ಸಂದರ್ಭದಲ್ಲಿ ಅವರ ಪತಿಯಿಂದ ವಿಶೇಷ ಗಿಫ್ಟ್ ಸಿಕ್ಕಿದೆ. ಹಾಗಂತ ಇದು ಲಕ್ಷಾಂತರ ರೂಪಾಯಿ ಬೆಲೆಯದ್ದಲ್ಲ. 10 ಕೋಟಿ ರೂಪಾಯಿ ಬೆಲೆ ಬಾಳುವಂಥ ಉಡುಗೊರೆ. ಹೌದು, ವಿಘ್ನೇಶ್ ಶಿವನ್ ಅವರು ಪತ್ನಿಗೆ ರೋಲ್ಸ್ ರಾಯ್ಸ್ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.

ನಯನತಾರಾ ಹಾಗೂ ವಿಘ್ನೇಶ್ ಶಿವನ್ ಪ್ರೀತಿಸಿ ಮದುವೆ ಆಗಿದ್ದಾರೆ. ಇವರ ವಿವಾಹ ಆಗಿ ಹಲವು ವರ್ಷಗಳು ಕಳೆದಿವೆ. ಆ ಬಳಿಕ ಇವರು ಬಾಡಿಗೆ ತಾಯತ್ನದ ಮೂಲಕ ಅವಳಿ ಮಕ್ಕಳನ್ನು ದತ್ತು ಪಡೆದರು. ನಯನತಾರಾ ಅವರು ಪತಿಗೆ ಈ ಮೊದಲು ಸಾಕಷ್ಟು ಉಡುಗೊರೆ ನೀಡಿದ್ದರು. ಈಗ ಪತ್ನಿಗೆ ಉಡುಗೊರೆ ನೀಡೋ ಸಮಯ. ಅವರು ಐಷಾರಾಮಿ ರೋಲ್ಸ್ ರಾಯ್ಸ್ ನೀಡಿದ್ದಾರೆ.ರೋಲ್ಸ್ ರಾಯ್ಸ್ ಎದುರು ನಯನತಾರಾ, ವಿಘ್ನೇಶ್ ಹಾಗೂ ಇಬ್ಬರು ಮಕ್ಕಳು ನಿಂತು ಪೋಸ್ ಕೊಟ್ಟಿದ್ದಾರೆ. ಈ ಫೋಟೋ ಗಮನ ಸೆಳೆಯುವ ರೀತಿಯಲ್ಲಿ ಇದೆ. ಈ ವೇಳೆ ಅವರು ಪತ್ನಿಗೆ ಬರ್ತ್​​ಡೇ ವಿಶ್ ಮಾಡಿದ್ದಾರೆ. ಎಲ್ಲರೂ ದಂಪತಿಗೆ ಅಭಿನಂದನೆ ತಿಳಿಸಿದ್ದಾರೆ.

ಈ ಕಾರಿನ ಮತ್ತೊಂದು ವಿಶೇಷ ಎಂದರೆ ಇದು ಸಂಪೂರ್ಣ ಎಲೆಕ್ಟ್ರಿಕ್ ಕಾರಾಗಿದೆ. ರೋಲ್ಸ್ ರಾಯ್ಸ್ ಅವರು ಪರಿಚಯಿಸಿದ ಮೊದಲ ಎಲೆಕ್ಟ್ರಿಕ್ ಕಾರು ಇದು. ಈ ಕಾರು ಒಮ್ಮೆ ಪೂರ್ತಿ ಚಾರ್ಜ್ ಆದರೆ 530 ಕಿ.ಮೀವರೆಗೆ ಚಲಿಸಬಹುದಾಗಿದೆ. ಈ ಕಾರು ಕೇವಲ 20 ನಿಮಿಷಗಳಲ್ಲಿ ಶೇ.80ರಷ್ಟು ಚಾರ್ಜ್ ಆಗಬಲ್ಲದು ಎಂಬುದು ವಿಶೇಷ. ಇನ್ನುಮುಂದೆ ನಯನತಾರಾ ಅವರು ಎಲೆಕ್ಟ್ರಿಕ್​ ರೋಲ್ಸ್ ರಾಯ್ಸ್​ನಲ್ಲಿ ಸುತ್ತಾಡಬಹುದಾಗಿದೆ.

ನಯನತಾರಾ ನಟನೆಯ ‘ಟೆಸ್ಟ್’ ಹೆಸರಿನ ಸಿನಿಮಾ ಈ ವರ್ಷ ಬಂದಿದೆ. ಈ ವರ್ಷ ಬಂದ ಅವರ ಏಕೈಕ ಸಿನಿಮಾ ಇದಾಗಿದೆ. ಈ ವರ್ಷ ಅವರ ಮತ್ತೆ ಯಾವುದೇ ಸಿನಿಮಾಗಳು ರಿಲೀಸ್ ಆಗದು. 2026ರಲ್ಲಿ ಅವರ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಮಾಡಬಹುದಾಗಿದೆ. ಕನ್ನಡದಲ್ಲಿ ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾದಲ್ಲೂ ಅವರು ಅಭಿನಯಿಸುತ್ತಿದ್ದಾರೆ. ಈ ಸಿನಿಮಾ ಕನ್ನಡ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ಏಕ ಕಾಲಕ್ಕೆ ಶೂಟ್ ಆಗುತ್ತಾ ಇದೆ. ಮುಂದಿನ ವರ್ಷ ಮಾರ್ಚ್​​ಗೆ ರಿಲೀಸ್ ಆಗಲಿದೆ. ಇತ್ತೀಚೆಗೆ ನಯನತಾರಾ ಹಾಗೂ ವಿಘ್ನೇಶ್ ಅವರು ಕರ್ನಾಟಕದ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿದ್ದರು.

Have any thoughts?

Share your reaction or leave a quick response — we’d love to hear what you think!

You may also like