ಟಾಲಿವುಡ್ ಸ್ಟಾರ್ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಅವರು ರಹಸ್ಯವಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ವಿಜಯ್ ದೇವರಕೊಂಡ ಅವರ ಮನೆಯಲ್ಲಿ ಎಂಗೇಜ್ಮೆಂಟ್ ಸಮಾರಂಭ ಅದ್ಧೂರಿಯಾಗಿ ಮಾಡಲಾಗಿದ್ದು ಇದರಲ್ಲಿ ಎರಡು ಕಡೆಯ ಕುಟುಂಬದ ಹಿರಿಯರು, ಸಂಬಂಧಿಕರು ಮತ್ತು ಆಪ್ತ ಸ್ನೇಹಿತರ ಮಾತ್ರ ಭಾಗಿಯಾಗಿದ್ದರು ಎನ್ನಲಾಗಿದೆ.
/newsfirstlive-kannada/media/media_files/2025/10/03/rashmika-2025-10-03-23-27-15.jpg)
ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ನಿಶ್ಚಿತಾರ್ಥ ಸಮಾರಂಭದಲ್ಲಿ ಕೇವಲ 2 ಕಡೆಯ ಕುಟುಂಬ ಸದಸ್ಯರು ಮತ್ತು ಕೆಲವು ಆಪ್ತರು ಮಾತ್ರ ಭಾಗವಹಿಸಿದ್ದರು. ಮುಂದಿನ ವರ್ಷ ಅಂದರೆ 2026ರ ಫೆಬ್ರವರಿಯಲ್ಲಿ ವಿವಾಹ ನಡೆಯಲಿದೆ. ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಗೀತ ಗೋವಿಂದಂ ಸಿನಿಮಾದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಅಂದಿನಿಂದ, ಅವರ ನಡುವೆ ಉತ್ತಮ ಸಂಬಂಧ ಬೆಳೆದಿದೆ. ಇದಾದ ಮೇಲೆ ಇಬ್ಬರ ಬಡುವೆ ಪ್ರೀತಿ ಹುಟ್ಟಿದೆ ಎನ್ನಲಾಗಿದೆ. ಆ ಮೇಲೆ ಡಿಯರ್ ಕಾಮ್ರೇಡ್ ಮೂವಿಯಲ್ಲಿ ಪರದೆಯನ್ನು ಹಂಚಿಕೊಂಡಿದ್ದರು.
Have any thoughts?
Share your reaction or leave a quick response — we’d love to hear what you think!