ಖ್ಯಾತ ನಿರ್ದೇಶಕ ರಾಜಮೌಳಿ ಮತ್ತು ರಾಜ್ಕುಮಾರ್ ಹಿರಾನಿ ಇಬ್ಬರೂ ದಾದಾಸಾಹೇಬ್ ಫಾಲ್ಕೆ ಬಯೋಪಿಕ್ ನಿರ್ದೇಶಿಸಲು ಮುಂದಾಗಿದ್ದರು. ಆದರೆ, ಜೂನಿಯರ್ ಎನ್ಟಿಆರ್ ನಟಿಸಬೇಕಿದ್ದ ರಾಜಮೌಳಿ ಅವರ ಯೋಜನೆಯನ್ನು ಫಾಲ್ಕೆ ಕುಟುಂಬ ವಿರೋಧಿಸಿತು. ಮತ್ತೊಂದೆಡೆ, ಆಮಿರ್ ಖಾನ್ಗೆ ಸ್ಕ್ರಿಪ್ಟ್ “ಡ್ರೈ” ಎನಿಸಿದ್ದರಿಂದ ಹಿರಾನಿ ಅವರ ಸಿನಿಮಾ ಕೂಡ ನಿಂತಿದೆ.

ಖ್ಯಾತ ನಿರ್ದೇಶಕ ಎಸ್ಎಸ್ ರಾಜಮೌಳಿ ಅವರು ‘ದಾದಾಸಹೇಬ್ ಫಾಲ್ಕೆ’ ಸಿನಿಮಾನ ನಿರ್ದೇಶನ ಮಾಡುವ ಬದಲು ಅದನ್ನು ಪ್ರೆಸೆಂಟ್ ಮಾಡಲು ಮುಂದಾದರು. ಈ ಚಿತ್ರವನ್ನು ನಿತಿನ್ ಕಕ್ಕರ್ ನಿರ್ದೇಶನ ಮಾಡಬೇಕಿತ್ತು. ಈ ಚಿತ್ರದಲ್ಲಿ ದಾದಾಸಾಹೇಬ್ ಫಾಲ್ಕೆ ಪಾತ್ರದಲ್ಲಿ ಜೂನಿಯರ್ ಎನ್ಟಿಆರ್ ನಟಿಸಬೇಕಿತ್ತು. ಈಗ ಸಿನಿಮಾ ನಿಂತಿದೆ ಎಂಬ ಸುದ್ದಿಯು ಹರಿದಾಡಿದೆ. ಹೀಗಿರುವಾಗಲೇ ಹಿರಾನಿ ನಿರ್ದೇಶನ ಮಾಡಬೇಕಿದ್ದ ಚಿತ್ರವೂ ನಿಂತಿದೆಯಂತೆ.
ದಾದಾಸಾಹೇಬ್ ಫಾಲ್ಕೆ ಸಿನಿಮಾ ಮಾಡುವ ವಿಚಾರದಲ್ಲಿ ಸ್ಪರ್ಧೆ ಏರ್ಪಟ್ಟಿತ್ತು ಎಂದರೂ ತಪ್ಪಾಗಲಾರದು. ನಿತಿನ್ ಅವರು ಹೇಗೆ ಈ ಸಿನಿಮಾ ಮಾಡಲು ಆಸಕ್ತಿ ತೋರಿಸಿದ್ದರೋ ಬಾಲಿವುಡ್ ನಿರ್ದೇಶಕ ರಾಜ್ಕುಮಾರ್ ಹಿರಾನಿ ಇದೇ ವಿಷಯ ಇಟ್ಟುಕೊಂಡು ಬಯೋಪಿಕ್ ಮಾಡಲು ನಿರ್ಧರಿಸಿದ್ದರು. ಈ ಚಿತ್ರಕ್ಕೆ ಆಮಿರ್ ಖಾನ್ ಹೀರೋ. ಆದರೆ, ಈಗ ಈ ಚಿತ್ರವೂ ಈಗ ನಿಂತಿದೆಯಂತೆ.
ಫಾಲ್ಕೆ ಕುಟುಂಬ ರಾಜ್ಕುಮಾರ್ ಹಿರಾನಿ ಪರವಾಗಿ ನಿಂತಿತ್ತು. ಅವರ ಸಿನಿಮಾನ ಕುಟುಂಬ ಬೆಂಬಲಿಸಿತ್ತು. ರಾಜಮೌಳಿ ವರ್ಷನ್ಗೆ ಕುಟುಂಬ ವಿರೋಧ ಹೊರಹಾಕಿತ್ತು. ಹೀಗಾಗಿ, ರಾಜಮೌಳಿ ಸಿನಿಮಾ ನಿಂತಿದೆ ಎನ್ನಲಾಗಿದೆ. ಈಗ ಹಿರಾನಿ ಸಿನಿಮಾ, ಸ್ಕ್ರಿಪ್ಟ್ ಕಾರಣದಿಂದ ನಿಂತು ಹೋಗಿದೆ ಎನ್ನಲಾಗುತ್ತಿದೆ. ಇದು ಅಭಿಮಾನಿಗಳ ಬೇಸರಕ್ಕೆ ಕಾರಣ ಆಗಿದೆ.
ಇಂದಿನ ಜಗತ್ತಿನಲ್ಲಿ ಸಿನಿಮಾನ ಮನರಂಜನೆ ದೃಷ್ಟಿಯಿಂದ ಮಾತ್ರ ನೋಡಲಾಗುತ್ತಿದೆ. ಬಯೋಪಿಕ್ ಮಾಡುವುದಾದರೂ ಅಲ್ಲಿ ಮಸಾಲೆ ಬೇಕು. ರಾಜ್ಕುಮಾರ್ ಹಿರಾನಿ ಮಾಡಿಕೊಂಡ ಸ್ಕ್ರಿಪ್ಟ್ ಆಮಿರ್ಗೆ ಡ್ರೈ ಎನಿಸಿದೆಯಂತೆ. ರಾಜ್ಕುಮಾರ್ ಹಿರಾನಿ ಸಿನಿಮಾಗಳಲ್ಲಿ ಹಾಸ್ಯ ಪ್ರಧಾನ ಆಗಿರುತ್ತವೆ. ಆದರೆ, ಈ ಸ್ಕ್ರಿಪ್ಟ್ನಲ್ಲಿ ಅದು ಕಾಣಿಸದ ಕಾರಣ, ಸಿನಿಮಾದಿಂದ ಹಿಂದೆ ಸರಿಯುವ ನಿರ್ಧಾರಕ್ಕೆ ಆಮಿರ್ ಬಂದಿದ್ದಾರಂತೆ. ಇದರಿಂದ ಚಿತ್ರ ನಿಂತಿದೆ ಎನ್ನಲಾಗಿದೆ. ಈಗ ರಾಜಮೌಳಿ ಅವರು ಫಾಲ್ಕೆ ಕುಟುಂಬವನ್ನು ಸಂಪರ್ಕಿಸುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.
ಆಮಿರ್ ಖಾನ್ ಹಾಗೂ ಹಿರಾನಿ ‘3 ಈಡಿಯಟ್ಸ್ ಸಿನಿಮಾದಲ್ಲಿ ಒಟ್ಟಾಗಿ ಕೆಲಸ ಮಾಡಿದ್ದರು. ಇದರ ಜೊತೆಗೆ ‘ಪಿಕೆ’ ಸಿನಿಮಾ ಕೂಡ ಮಾಡಿದ್ದರು. ಎರಡೂ ಸಿನಿಮಾಗಳು ಸೂಪರ್ ಹಿಟ್ ಆದವು. ಈ ಎನರ್ಜಿಯನ್ನು ಮ್ಯಾಚ್ ಮಾಡಲು ಮತ್ತೊಮ್ಮೆ ಸಾಧ್ಯವಾಗೋದು ಅನುಮಾನವೇ.
Have any thoughts?
Share your reaction or leave a quick response — we’d love to hear what you think!