Home Latest Newsಸಮುದ್ರ ತೀರಕ್ಕೆ ಅಪ್ಪಳಿಸಿದ ರಾಶಿ ರಾಶಿ ಮೀನು! ಮಲ್ಪೆ ಸೀವಾಕ್ ಬಳಿ ಅಚ್ಚರಿಯ ಘಟನೆ…!

ಸಮುದ್ರ ತೀರಕ್ಕೆ ಅಪ್ಪಳಿಸಿದ ರಾಶಿ ರಾಶಿ ಮೀನು! ಮಲ್ಪೆ ಸೀವಾಕ್ ಬಳಿ ಅಚ್ಚರಿಯ ಘಟನೆ…!

by shiv
0 comments

ಉಡುಪಿ, ನವೆಂಬರ್ 5: ಏಕಾಏಕಿ ದಡಕ್ಕಪ್ಪಳಿಸಿದ ಬೃಹತ್ ಅಲೆ. ಅದರೊಂದಿಗೆ ಬಂದು ಬಿದ್ದ ರಾಶಿ ರಾಶಿ ಮೀನುಗಳು. ಏಕಾಏಕಿ ಸಮುದ್ರ ತೀರದಲ್ಲಿ ಲಕ್ಷ ಲಕ್ಷ ಬಂಗುಡೆ, ಭೂತಾಯಿ‌ ಮೀನುಗಳ ಸುಗ್ಗಿ. ಈ ಅಪರೂಪದ ವಿದ್ಯಮಾನಕ್ಕೆ ಸಾಕ್ಷಿಯಾಗಿದ್ದು ಉಡುಪಿಯ ಮಲ್ಪೆ ಕಡಲತೀರದ ಸೀವಾಕ್. ಮಂಗಳವಾರ ತಡರಾತ್ರಿ ನಡೆದ ಅಚ್ಚರಿಯ ಘಟನೆ ಸ್ಥಳೀಯರು ಮತ್ತು ಮೀನುಗಾರರನ್ನು ಆಶ್ಚರ್ಯ ಚಕಿತರನ್ನಾಗಿಸಿದೆ. ಲಕ್ಷ ಲಕ್ಷ ಬಂಗುಡೆ, ಭೂತಾಯಿ‌ ಮೀನುಗಳು ತೀರಕ್ಕೆ ಅಪ್ಪಳಿಸಿದ ವಿಡಿಯೋ ಈಗ ವೈರಲ್ ಆಗಿದೆ.

Have any thoughts?

Share your reaction or leave a quick response — we’d love to hear what you think!

You may also like