Home EducationWorld Tsunami Awareness Day 2025: ಸುನಾಮಿ ಎಚ್ಚರಿಕೆ ವ್ಯವಸ್ಥೆಗಳು ಸಾವಿರಾರು ಜೀವಗಳನ್ನು ಉಳಿಸಬಲ್ಲದು

World Tsunami Awareness Day 2025: ಸುನಾಮಿ ಎಚ್ಚರಿಕೆ ವ್ಯವಸ್ಥೆಗಳು ಸಾವಿರಾರು ಜೀವಗಳನ್ನು ಉಳಿಸಬಲ್ಲದು

by shiv
0 comments

ನೈಸರ್ಗಿಕ ವಿಕೋಪಗಳಲ್ಲಿ ಸುನಾಮಿ ಕೂಡ ಒಂದು. ಈ ವಿನಾಶಕಾರಿ ಪ್ರಾಕೃತಿಕ ವಿಕೋಪ ಅದೆಷ್ಟೋ ಜೀವಗಳನ್ನು ಬಲಿ ಪಡೆದುಕೊಳ್ಳುತ್ತವೆ. ಈ ನೈಸರ್ಗಿಕ ವಿಕೋಪಗಳನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ, ಆದರೆ ಸುನಾಮಿ ಅಪ್ಪಳಿಸುವ ಮೊದಲು ನೀಡುವ ಎಚ್ಚರಿಕೆಗಳು ಲಕ್ಷಾಂತರ ಜೀವಗಳನ್ನು ಉಳಿಸಬಹುದು. ಹಾಗಾಗಿ ಇವುಗಳ ಬಗೆಗಿನ ತಿಳುವಳಿಕೆ, ಪ್ರಾಣ ರಕ್ಷಣೆಗಾಗಿ ತೆಗೆದುಕೊಳ್ಳಬೇಕಾದ ಮುಂಜಾಗೃತ ಕ್ರಮಗಳ ಬಗ್ಗೆ ಜಾಗೃತಿಯನ್ನು ಮೂಡಿಸಲು ಪ್ರತಿವರ್ಷ ನವೆಂಬರ್‌ 05 ರಂದು ವಿಶ್ವ ಸುನಾಮಿ ದಿನವನ್ನು ಆಚರಿಸಲಾಗುತ್ತದೆ.

ಸಾಗರದ ತಳಭಾಗದಲ್ಲಿ ಸಂಭವಿಸುವ ಭೂಕಂಪನದಿಂದ ಸಮುದ್ರದ ಬೃಹತ್‌ ಅಲೆಗಳು ಅಪ್ಪಳಿಸುವುದನ್ನು ಸುನಾಮಿ (Tsunami) ಎಂದು ಕರೆಯಲಾಗುತ್ತದೆ. ಸಣ್ಣ ಮಟ್ಟದಲ್ಲಿನ ಭೂಕಂಪನ ಹೆಚ್ಚಿನ ಪರಿಣಾಮ ಬೀರುವುದಿಲ್ಲ. ಆದರೆ ಸಮುದ್ರದಲ್ಲಿ ತೀವ್ರ ಭೂಕಂಪನ ಉಂಟಾದಾಗ ಸಮುದ್ರದ ರಕ್ಕಸ ಅಲೆಗಳು ಊರಿಗೆ ಊರನ್ನೇ ಬಲಿ ಪಡೆಯುತ್ತವೆ. ಆದರೆ ಈ ಪ್ರಾಕೃತಿಕ ವಿಕೋಪಗಳು ಸಂಭವಿಸುವ ಮುನ್ನ ನೀಡುವಂತಹ ಎಚ್ಚರಿಕೆ ವ್ಯವಸ್ಥೆಗಳಿಂದ ಲಕ್ಷಾಂತರ ಜೀವಗಳನ್ನು ಉಳಿಸಬಹುದು. ಹಾಗಾಗಿ ಈ ವ್ಯವಸ್ಥೆಗಳ ಬಗ್ಗೆ ತಿಳುವಳಿಕೆ ಮೂಡಿಸಲು, ಸುನಾಮಿಯಂತಹ ವಿನಾಶಕಾರಿ ಪ್ರಾಕೃತಿಕ ವಿಕೋಪಗಳ ಅಪಾಯದ ಬಗ್ಗೆ ಜನರಿಗೆ ಶಿಕ್ಷಣ ನೀಡಲು ಮತ್ತು ಈ ವಿಕೋಪಗಳು ಸಂಭವಿಸಿದಾಗ ತೆಗೆದುಕೊಳ್ಳಬೇಕಾದ ಮುಂಜಾಗೃತ ಕ್ರಮಗಳ ಬಗ್ಗೆ ಅರಿವು ಮೂಡಿಸಲು ಪ್ರತಿವರ್ಷ ನವೆಂಬರ್‌ 05 ರಂದು ವಿಶ್ವ ಸುನಾಮಿ ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಇತಿಹಾಸ ಮತ್ತು ಮಹತ್ವದ ಬಗ್ಗೆ ತಿಳಿಯೋಣ ಬನ್ನಿ.

Have any thoughts?

Share your reaction or leave a quick response — we’d love to hear what you think!

You may also like