ಅಪರೂಪದ ಸಂಪ್ರದಾಯಗಳಿಗೆ ಹೆಸರಾದ ಉಡುಪಿಯ ಕೃಷ್ಣಮಠದಲ್ಲಿ ಲಕ್ಷದೀಪಗಳಿಂದ ಸಂಭ್ರಮ. ಕಡಗೋಲು ಕೃಷ್ಣನ ಮೊದಲ ರಥೋತ್ಸವಕ್ಕೆ ಅಷ್ಟಮಠಗಳ ರಥಬೀದಿ ಅಲಂಕಾರಗೊಂಡು ಹಣತೆಯ ದೀಪಗಳಿಂದ ಕಂಗೊಳಿಸುತ್ತಿದೆ..

ದೇವರ ಸ್ವಾಗತಕ್ಕೆ ಉಡುಪಿಯ ಅಷ್ಟಮಠಗಳ ರಥಬೀದಿ ಸಜ್ಜಾಗಿದೆ.. ಕೃಷ್ಣನೂರು ಉಡುಪಿ ದೀಪಗಳಿಂದ ಕಂಗೊಳಿಸ್ತಿದೆ.. ಕೃಷ್ಣನಿಗೆ ಹಣತೆಯಲ್ಲಿ ದೀಪ ಬೆಳಗಿ ಭಕ್ತರು ಸಂಭ್ರಮಿಸಿದ್ರು..

ಕೃಷ್ಣ ದೇವರು ಯೋಗ ನಿದ್ರೆಯಲ್ಲಿರ್ತಾನೆ ಅನ್ನೋದು ನಂಬಿಕೆ. ಉತ್ಥಾನ ದ್ವಾದಶಿಯ ದಿನ ಯೋಗ ನಿದ್ರೆ ಪೂರೈಸಿ ರಥಬೀದಿಗೆ ಬರುವ ದೇವರನ್ನ ಬರಮಾಡಿಕೊಳ್ಳಲು ನಡೆದಿರುವ ತಯಾರಿ ಇದು. ಈ ಮಹೋತ್ಸವವನ್ನ ಲಕ್ಷದೀಪೋತ್ಸವ ಎಂದು ಭಕ್ತಕೋಟಿಯ ಬಣ್ಣನೆ..
ಇಳಿ ಹೊತ್ತಿನಲ್ಲಿ ಭಕ್ತರೆಲ್ಲರೂ ರಥಬೀದಿಯಲ್ಲಿ ಸೇರಿ ಸಾವಿರಾರು ದೀಪಗಳನ್ನ ಬೆಳಗಿದರು. ಮಧ್ವ ಸರೋವರದಲ್ಲಿ ಕ್ಷೀರಾಬ್ದಿ ಪೂಜೆ ನಡೆಯಿತು..ಬಳಿಕ ಮಠದಿಂದ ಹೊರ ಬರುವ ಕೃಷ್ಣ ದೇವರ ಉತ್ಸವ ಮೂರ್ತಿಯನ್ನ ಮಧ್ವ ಸರೋವರಕ್ಕೆ ಕೊಂಡೊಯ್ಯಲಾಯ್ತು.. ಸಾಲು ಸಾಲು ದೀಪಗಳ ನಡುವೆ ಕೃಷ್ಣ ದೇವರ ಮೆರವಣಿಗೆ ನಡೆಯಿತು.. ರಥದ ಮುಂಭಾಗದಲ್ಲಿ ಚಂಡೆಗಳ ನಾದ ವೈಭವ ಮೇಳೈಸಿತು.

ಈ ಬಾರಿಯ ಲಕ್ಷ ದೀಪೋತ್ಸವದಲ್ಲಿ ಪರ್ಯಾಯ ಪುತ್ತಿಗೆ ಶ್ರೀಗಳ ಸಹಿತ ಹಲವು ಮಠಗಳ ಯತಿಗಳು ಭಾಗವಹಿಸಿದ್ರು..ನೂರಾರು ಭಕ್ತರು ಸೇರಿ ಎರಡೂ ರಥಗಳನ್ನು ಎಳೆದರು. ಸಾವಿರಾರು ಸಂಖ್ಯೆ ಯಲ್ಲಿ ಕೃಷ್ಣ ಮಠಕ್ಕೆ ಬಂದ ಭಕ್ತರು ಲಕ್ಷದೀಪೋತ್ಸವದಲ್ಲಿ ಪಾಲ್ಗೋಂಡು ಭಕ್ತಿಯಲ್ಲಿ ಲೀನರಾದ್ರು..
ಒಟ್ಟಾರೆ ಲಕ್ಷದೀಪೋತ್ಸವದೊಂದಿಗೆ ಆರಂಭವಾಗುವ ಕೃಷ್ಣ ದೇವರ ರಥೋತ್ಸವ ಮುಂದಿನ ಮಳೆಗಾಲದವರೆಗೆ ನಡೆಯಲಿದೆ.ಅಷ್ಟಮಠಗಳ ರಥಬೀದಿಯಲ್ಲಿ ಸೇವಾರೂಪದಲ್ಲಿ ನಡೆಯುವ ಉತ್ಸವದಿಂದ ದಿನವೂ ಹಬ್ಬದ ವಾತಾವರಣ ಇರಲಿದೆ..
ಮಠಾಧೀಶರ ಉಪಸ್ಥಿತಿಯಲ್ಲಿ ವೈಭವದ ನಡುವೆ ಕೃಷ್ಣನ ದೇವರ ಮೆರವಣಿಗೆ ನಡೆಸಲಾಯ್ತು. ರಥಬೀದಿಯಲ್ಲಿ ಲಕ್ಷದೀಪೋತ್ಸವ ಕಂಡು ಭಕ್ತರು ಸಂತಸಗೊಂಡರು.
Have any thoughts?
Share your reaction or leave a quick response — we’d love to hear what you think!