Home Entertainmentಹಾರಿಸ್ ರೌಫ್​ಗೆ ನಿಷೇಧ: ಇಂದಿನ ಪಂದ್ಯದಲ್ಲಿ ಕಣಕ್ಕಿಳಿಯುವಂತಿಲ್ಲ..!

ಹಾರಿಸ್ ರೌಫ್​ಗೆ ನಿಷೇಧ: ಇಂದಿನ ಪಂದ್ಯದಲ್ಲಿ ಕಣಕ್ಕಿಳಿಯುವಂತಿಲ್ಲ..!

by shiv
0 comments

Haris Rauf: ಪಾಕಿಸ್ತಾನ್ ತಂಡದ ಪ್ರಮುಖ ವೇಗಿಗಳಲ್ಲಿ ಹಾರಿಸ್ ರೌಫ್ ಕೂಡ ಒಬ್ಬರು. ಆದರೆ ಏಷ್ಯಾಕಪ್ ಟೂರ್ನಿಯ ವೇಳೆ ದುರ್ನಡತೆ ತೋರಿದ್ದಕ್ಕಾಗಿ ಇದೀಗ ಹಾರಿಸ್ ರೌಫ್​ ಎರಡು ಪಂದ್ಯಗಳ ನಿಷೇಧಕ್ಕೆ ಒಳಗಾಗಿದ್ದಾರೆ. ಹೀಗಾಗಿ ಸೌತ್ ಆಫ್ರಿಕಾ ವಿರುದ್ಧದ ದ್ವಿತೀಯ ಏಕದಿನ ಪಂದ್ಯದಲ್ಲಿ ಹಾರಿಸ್ ರೌಫ್ ಕಣಕ್ಕಿಳಿಯುವಂತಿಲ್ಲ.

ಪಾಕಿಸ್ತಾನ್ ತಂಡದ ಪ್ರಮುಖ ವೇಗಿ ಹಾರಿಸ್ ರೌಫ್ ಸೌತ್ ಆಫ್ರಿಕಾ ವಿರುದ್ಧದ 2ನೇ ಏಕದಿನ ಪಂದ್ಯದಿಂದಲೂ ಹೊರಗುಳಿಯಲಿದ್ದಾರೆ. ಇದಕ್ಕೆ ಮುಖ್ಯ ಕಾರಣ ಐಸಿಸಿ ಹೇರಿರುವ ನಿಷೇಧ. ಏಷ್ಯಾಕಪ್ ಟೂರ್ನಿ ವೇಳೆ ಕ್ರೀಡಾ ಘನತೆಗೆ ಧಕ್ಕೆ ತಂದ ಹಿನ್ನಲೆ ಇಂಟರ್​ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ ಹಾರಿಸ್ ರೌಫ್​ ಮೇಲೆ 2 ಪಂದ್ಯಗಳ ನಿಷೇಧ ಹೇರಲಾಗಿದೆ.

Have any thoughts?

Share your reaction or leave a quick response — we’d love to hear what you think!

You may also like