ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಬಿಗ್ ಬ್ಯಾಷ್ ಲೀಗ್ನಲ್ಲಿ ಹೊಸ ನಿಯಮವನ್ನು ಜಾರಿಗೊಳಿಸಲಾಗುತ್ತದೆ. ಆ ನಿಯಮವೆಂದರೆ ಕ್ಯಾಚ್ ಹಿಡಿದರೆ ಚೆಂಡು ನಿಮ್ದೆ ಎನ್ನುವ ರೂಲ್ಸ್. ಅಂದರೆ ಪ್ರತಿ ಇನ್ನಿಂಗ್ಸ್‌ನ ಮೊದಲ ಓವರ್‌ನಲ್ಲಿ ಚೆಂಡು ಸ್ಟೇಡಿಯಂ ಗ್ಯಾಲರಿಗೆ ತಲುಪಿ ಪ್ರೇಕ್ಷಕನು ಆ ಚೆಂಡನ್ನು ಹಿಡಿದರೆ, ಬಾಲ್ ಆತನದಾಗಲಿದೆ.

ಉದಾಹರಣೆಗೆ ಮೊದಲ ಓವರ್‌ನಲ್ಲಿ ಮಿಚೆಲ್ ಮಾರ್ಷ್ ಬಾರಿಸಿದ ಚೆಂಡು ಸಿಕ್ಸ್ ಆಗಿ ಪ್ರೇಕ್ಷಕನ ಕೈ ಸೇರಿದರೆ ಆತ ಚೆಂಡನ್ನು ಮರಳಿಸಬೇಕಿಲ್ಲ. ಬದಲಾಗಿ ಆ ಚೆಂಡು ಆತ ಕೊಂಡೊಯ್ಯಬಹುದು. ಇತ್ತ ಹೊಸ ಚೆಂಡಿನೊಂದಿಗೆ ಪಂದ್ಯವನ್ನು ಮುಂದುವರೆಸಲಾಗುತ್ತದೆ.
ಈ ನಿಯಮವು ಕೇವಲ ಸಿಕ್ಸ್ಗಾಗಿ ಮಾತ್ರವಲ್ಲ. ಬದಲಾಗಿ ಫೋರ್ ಹೋಗಿ ಸಹ ಚೆಂಡು ಪ್ರೇಕ್ಷಕನ ಕೈ ಸೇರಿದರೆ ಅದನ್ನು ಮರಳಿಸಬೇಕಿಲ್ಲ. ಆದರೆ ಈ ನಿಯಮವು ಪ್ರತಿ ಇನಿಂಗ್ಸ್ನ ಮೊದಲ ಓವರ್‌ನಲ್ಲಿ ಮಾತ್ರ ಜಾರಿ ಇರಲಿದೆ. ಇಂತಹದೊಂದು ನಿಯಮವನ್ನು ಪರಿಚಯಿಸುವ ಮೂಲಕ ಪ್ರೇಕ್ಷಕರ ಉತ್ಸಾಹವನ್ನು ಹೆಚ್ಚಿಸಲು ಕ್ರಿಕೆಟ್ ಆಸ್ಟ್ರೇಲಿಯಾ ಮುಂದಾಗಿದೆ.
ಅದರಂತೆ ಡಿಸೆಂಬರ್ 14 ರಿಂದ 15ನೇ ಸೀಸನ್ ಮೂಲಕ ಹೊಸ ನಿಯಮ ಜಾರಿಗೆ ಬರಲಿದ್ದು, ಈ ನಿಯಮವನ್ನು ಪ್ರೇಕ್ಷಕರು ಹೇಗೆ ಸ್ವೀಕರಿಸಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.
ಬಿಗ್ ಬ್ಯಾಷ್ ಲೀಗ್ನಲ್ಲಿ ಕಣಕ್ಕಿಳಿಯುವ ತಂಡಗಳು:
- ಅಡಿಲೇಡ್ ಸ್ಟ್ರೈಕರ್ಸ್
- ಬ್ರಿಸ್ಬೇನ್ ಹೀಟ್
- ಹೊಬಾರ್ಟ್ ಹರಿಕೇನ್ಸ್
- ಮೆಲ್ಬೋರ್ನ್ ರೆನೆಗೇಡ್ಸ್
- ಮೆಲ್ಬೋರ್ನ್ ಸ್ಟಾರ್ಸ್
- ಪರ್ತ್ ಸ್ಕಾರ್ಚರ್ಸ್
- ಸಿಡ್ನಿ ಸಿಕ್ಸರ್ಸ್
- ಸಿಡ್ನಿ ಥಂಡರ್.
Have any thoughts?
Share your reaction or leave a quick response — we’d love to hear what you think!