Home Healthಹೊರಗಿನ ಊಟದಿಂದ ಮನೆ ಊಟಕ್ಕೆ ಶಿಫ್ಟ್​​: ಸಣ್ಣ ಉಳಿತಾಯದಿಂದ ಭಾರೀ ಲಾಭ, ಜೇಬಲ್ಲೇ ಉಳಿಯಿತು ಸಾವಿರಾರು ರೂ!

ಹೊರಗಿನ ಊಟದಿಂದ ಮನೆ ಊಟಕ್ಕೆ ಶಿಫ್ಟ್​​: ಸಣ್ಣ ಉಳಿತಾಯದಿಂದ ಭಾರೀ ಲಾಭ, ಜೇಬಲ್ಲೇ ಉಳಿಯಿತು ಸಾವಿರಾರು ರೂ!

by shiv
0 comments

ಚೆನ್ನೈನ ವ್ಯಕ್ತಿಯೊಬ್ಬರು ಪ್ರತಿದಿನ ಝೊಮ್ಯಾಟೋದಲ್ಲಿ 200-300 ರೂ.ಗೆ ಊಟ ಆರ್ಡರ್ ಮಾಡುತ್ತಿದ್ದವರು, ಇದೀಗ ದಿನಕ್ಕೆ 60 ರೂ. ಖರ್ಚು ಮಾಡುತ್ತಿದ್ದಾರೆ. ಈ ಬಗ್ಗೆ ಅವರ ಸ್ನೇಹಿತರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಒಂದು ಊಟಕ್ಕೆ 200ರಿಂದ 300 ರೂ. ಖರ್ಚು ಮಾಡುತ್ತಿದ್ದ ನನ್ನ ಸ್ನೇಹಿತ, ತನ್ನ ದಿನದ ಖರ್ಚಿನಲ್ಲಿ ದೊಡ್ಡ ಮಟ್ಟದ ಬದಲಾವಣೆ ಮಾಡಿಕೊಂಡಿದ್ದಾರೆ ಎಂದು ಹೇಳಿದ್ದಾರೆ.

 

ಬೆಂಗಳೂರುದೆಹಲಿಯಂತಹ ದೊಡ್ಡ ದೊಡ್ಡ ನಗರದಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ಚೆನ್ನೈನ ವ್ಯಕ್ತಿಯೊಬ್ಬರು ಪ್ರತಿದಿನದ ಊಟದ ಖರ್ಚನ್ನು (daily meal expenses) ಕಡಿಮೆ ಮಾಡುವುದು ಹೇಗೆಎಂಬ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಟಿಪ್ಸ್​​ ನೀಡಿದ್ದಾರೆಇದೀಗ ಇವರು ನೀಡಿರುವ ಸಲಹೆ ಸೋಶಿಯಲ್​​​ ಮೀಡಿಯಾದಲ್ಲಿ ವೈರಲ್​​ ಆಗಿದೆರೆಡ್ಡಿಟ್‌ನಲ್ಲಿ ವ್ಯಕ್ತಿಯೊಬ್ಬರು ತಮ್ಮ ಸಹೋದ್ಯೋಗಿ ದಿನನಿತ್ಯದ ಖರ್ಚಿನಲ್ಲಿ ಮಾಡಿದ ಬದಲಾವಣೆ ಬಗ್ಗೆ ಹಂಚಿಕೊಂಡಿದ್ದಾರೆ. “ನನ್ನ ಆಫೀಸ್​​ ಸ್ನೇಹಿತ ಪ್ರತಿದಿನ ಝೊಮ್ಯಾಟೊದಲ್ಲಿ ಫುಡ್​​​ ಆರ್ಡರ್​ ಮಾಡುತ್ತಿದ್ದರುಒಂದು ಊಟಕ್ಕೆ 200ರಿಂದ 300 ರೂಖರ್ಚು ಆಗುತ್ತಿತ್ತುಆದರೆ ಈಗ ಅವರು ತಮ್ಮ ಮನೆಯಿಂದ ಬಾಕ್ಸ್​​​ ​ ತರುತ್ತಿದ್ದಾರೆಇದರಿಂದ ತಮ್ಮ ದಿನನಿತ್ಯದ ಊಟದ ಖರ್ಚಿನಲ್ಲಿ ದೊಡ್ಡ ಮಟ್ಟದ ಉಳಿತಾಯವನ್ನು ಮಾಡುತ್ತಿದ್ದಾರೆ.” ಎಂದು ಪೋಸ್ಟ್​​​​ನಲ್ಲಿ ಬರೆದುಕೊಂಡಿದ್ದಾರೆ.

ಪ್ರತಿದಿನ ಅವರು ಸ್ಟೀಲ್ ಟಿಫಿನ್​​ನಲ್ಲಿ ಲೆಮನ್​​ ರೈಸ್​, ಜತೆಗೆ ಒಂದು ಕಪ್ ಮೊಸರು ಮತ್ತು ಸ್ವಲ್ಪ ಹಪ್ಪಳಇದು ಅವರ ಪ್ರತಿದಿನದ ಊಟ ಆಗಿತ್ತುಜ್ಯೂಸ್​​​, ಟೀಕಾಫಿ ಕುಡಿಯುವುದನ್ನು ಕೂಡ ಬಿಟ್ಟಿದ್ದಾರೆಈಗ ಅವರ ದಿನದ ಖರ್ಚು 60 ರೂ., ಆಫೀಸ್​​​ನಲ್ಲಿ ನೀರು ಬಿಟ್ಟು ಬೇರೆ ಯಾವುದನ್ನೂ ಕೂಡ ತೆಗೆದುಕೊಳ್ಳುವುದಿಲ್ಲ ಎಂದು ರೆಡ್ಡಿಟ್‌ನಲ್ಲಿ ಹೇಳಿಕೊಂಡಿದ್ದಾರೆಝೊಮ್ಯಾಟೊದಲ್ಲಿ 200ರಿಂದ 300 ರೂವರೆಗಿನ ಆಹಾರಗಳನ್ನು ಆರ್ಡರ್​​ ಮಾಡುತಿದ್ದಾಗ ಅವರಿಗೆ ತಿಂಗಳಿಗೆ  6,000 ರೂ.ಕ್ಕಿಂತ ಹೆಚ್ಚು ಖರ್ಚಾಗುತ್ತಿತ್ತುಇನ್ನು ವೀಕೆಂಡ್​​​​ನಲ್ಲಿ ಇದಕ್ಕಿಂತ ಹೆಚ್ಚು ಖರ್ಚು ಮಾಡುತ್ತಿದ್ದರುಅವರು ಪ್ರತಿದಿನ ರಾತ್ರಿಯೇ ಎಲ್ಲ ಅಡುಗೆ ಮಾಡಿ ಫ್ರಿಡ್ಜ್‌ನಲ್ಲಿ ಇಟ್ಟು ಬೆಳಿಗ್ಗೆ ಬಿಸಿ ಮಾಡಿ ಲಂಚ್​​​ ಬಾಕ್ಸ್​​​ಗೆ ಹಾಕಿ ತರುತ್ತಾರೆ.

ನೆಟ್ಟಿಗರ ಕಮೆಂಟ್​​ ಹೀಗಿತ್ತು

ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆನಾನು ಪ್ರತಿದಿನ ಮನೆಯಲ್ಲೇ ಅಡುಗೆ ಮಾಡಿ ಆಫೀಸ್​​ಗೆ ತೆಗೆದುಕೊಂಡು ಹೋಗುತ್ತೇನೆಊಟರೊಟ್ಟಿಹಣ್ಣುಗಳು ಮಾತ್ರ ನನ್ನ ದಿನನಿತ್ಯ ಆಹಾರ ಎಂದು ಒಬ್ಬರು ಕಮೆಂಟ್​​ ಮಾಡಿದ್ದಾರೆಮತ್ತೊಬ್ಬರು ಮನೆಯಲ್ಲಿ ಊಟ ತಯಾರಿಸಿ ತೆಗೆದುಕೊಂಡು ಹೋಗುವುದರಿಂದ ಖರ್ಚು ಕಡಿಮೆಆರೋಗ್ಯವಾಗಿ ಕೂಡ ಇರುತ್ತದೆ ಎಂದು ಹೇಳಿದ್ದಾರೆ.

Have any thoughts?

Share your reaction or leave a quick response — we’d love to hear what you think!

You may also like