Home FinanceGold Rate Today Bangalore: ಚಿನ್ನ, ಬೆಳ್ಳಿ ಬೆಲೆ ಸೋಮವಾರ ಭರ್ಜರಿ ಏರಿಕೆ

Gold Rate Today Bangalore: ಚಿನ್ನ, ಬೆಳ್ಳಿ ಬೆಲೆ ಸೋಮವಾರ ಭರ್ಜರಿ ಏರಿಕೆ

by shiv
0 comments

Bullion Market 2025 November 10th: ಚಿನ್ನ ಮತ್ತು ಬೆಳ್ಳಿ ಬೆಲೆಗಳು ಭಾರತದಲ್ಲಿ ಇಂದು ಭರ್ಜರಿ ಜಿಗಿತ ಕಂಡಿವೆ. ಚಿನ್ನದ ಬೆಲೆ 110 ರೂ ಏರಿದರೆ, ಬೆಳ್ಳಿ ಬೆಲೆ 2.50 ರೂ ಏರಿದೆ. ಆಭರಣ ಚಿನ್ನದ ಬೆಲೆ 11,185 ರೂನಿಂದ 11,295 ರೂಗೆ ಏರಿದೆ. ಅಪರಂಜಿ ಚಿನ್ನದ ಬೆಲೆ 12,202 ರೂನಿಂದ 12,322 ರೂಗೆ ಏರಿದೆ. ಬೆಳ್ಳಿ ಬೆಲೆ ಮುಂಬೈ, ಬೆಂಗಳೂರು ಮೊದಲಾದೆಡೆ 155 ರೂಗೆ ಏರಿದೆ. ಚೆನ್ನೈ ಮೊದಲಾದೆಡೆ ಬೆಲೆ 167 ರೂಗೆ ಏರಿದೆ.

ಬೆಂಗಳೂರು, ನವೆಂಬರ್ 10: ಕಳೆದ 10-12 ದಿನಗಳಿಂದ 1150 ರೂಗಳಷ್ಟು ಇಳಿಕೆಯಾಗಿದ್ದ ಚಿನ್ನದ ಬೆಲೆ (Gold rate) ಇವತ್ತು ಸೋಮವಾರ ಒಂದೇ ದಿನ 110 ರೂ ಹೆಚ್ಚಿದೆ. ಬೆಳ್ಳಿ ಬೆಲೆಯೂ ಇಂದು ಹೈಜಂಪ್ ಆಗಿದೆ. 152.50 ರೂ ಇದ್ದ ಒಂದು ಗ್ರಾಮ್ ಬೆಳ್ಳಿ ಬೆಲೆ ಇವತ್ತು 155 ರೂಗೆ ಏರಿದೆ. ಭಾರತದಲ್ಲಿ ಮಾತ್ರ ಇಂದು ಈ ಏರಿಕೆ ಕಂಡು ಬಂದಿರುವುದು. ವಿದೇಶಗಳಲ್ಲಿ ಹೆಚ್ಚಿನ ಕಡೆ ಚಿನ್ನದ ಬೆಲೆಯಲ್ಲಿ ವ್ಯತ್ಯಯವಾಗಿಲ್ಲ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,12,950 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,23,220 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 15,500 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,12,950 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 15,500 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 16,700 ರೂ ಇದೆ.

Have any thoughts?

Share your reaction or leave a quick response — we’d love to hear what you think!

You may also like