Home Entertainmentಟೀಂ ಇಂಡಿಯಾದ ಸ್ಟಾರ್​ ಆಲ್​ರೌಂಡರ್​ನ ಹೃದಯ ಕದ್ದ ಈ ಚೆಲವೆ ಯಾರು?

ಟೀಂ ಇಂಡಿಯಾದ ಸ್ಟಾರ್​ ಆಲ್​ರೌಂಡರ್​ನ ಹೃದಯ ಕದ್ದ ಈ ಚೆಲವೆ ಯಾರು?

by shiv
0 comments

ಜಸ್​ಪ್ರಿತ್​​ ಬೂಮ್ರಾ – ಸಂಜನಾ ಗಣೇಶನ್​. ಕ್ರಿಕೆಟರ್​​-ಆ್ಯಂಕರ್​ ನಡುವಿನ ಈ ಲವ್​ ಸ್ಟೋರಿ ಬಗ್ಗೆ ನಿಮಗೆ ಗೊತ್ತು. ಇಂತದ್ದೇ ಮತ್ತೊಂದು ಪ್ರೇಮ್​ ಕಹಾನಿ ಟೀಮ್​ ಇಂಡಿಯಾದಲ್ಲೀಗ ಸದ್ದು ಮಾಡ್ತಿದೆ. ಆ್ಯಂಕರ್​ ಅಂದಕ್ಕೆ ಆಲ್​​ರೌಂಡರ್​ ವಾಷಿಂಗ್ಟನ್​ ಸುಂದರ್​ ಬೋಲ್ಡ್​ ಆಗಿದ್ದಾರಂತೆ.

ಭಾರತೀಯ ಕ್ರಿಕೆಟ್​ನಲ್ಲಿ ಮತ್ತೆ ಪ್ರೀತಿ-ಪ್ರೇಮದ ಸದ್ದು ಜೋರಾಗಿದೆ.​ ಆಲ್​​ರೌಂಡರ್ ಹಾರ್ದಿಕ್​ ಪಾಂಡ್ಯ ರೂಮರ್ಡ್​​​ ಗರ್ಲ್​ ಫ್ರೆಂಡ್​ ಜೊತೆಗೆ ಪದೇ ಪದೇ​ ಕಾಣಿಸಿಕೊಳ್ತಿರೋದು ಈಗ ಹಳೆ ವಿಚಾರ. ಇದೀಗ ಯುವ ಆಲ್​​ರೌಂಡರ್ ವಾಷಿಂಗ್ಟನ್​ ಸುಂದರ್ ಸರದಿ. ಸುಂದರ್​​ ಪ್ರೇಮ್​ ಕಹಾನಿ ಇದೀಗ ಕ್ರಿಕೆಟ್​ ಲೋಕದಲ್ಲೀಗ ಹಲ್​ಚಲ್​ ಎಬ್ಬಿಸಿದೆ. ತಮಿಳುನಾಡಿನ ಆಲ್​​ರೌಂಡರ್​​​, ಸುಂದರಿಯೊಬ್ಬಳ ಜೊತೆಗೆ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದಾರೆ ಅನ್ನೋ ಸುದ್ದಿ ಜೋರಾಗಿ ಹಬ್ಬಿದೆ. ಅಂದ್ಹಾಗೆ ಆ ಸುಂದರಿಯ ಹೆಸರು ಸಾಹಿಬಾ ಬಾಲಿ.

ಸುಂದರಿ ಯಾರು ಗೊತ್ತಾ.?

ವಾಷಿಂಗ್ಟನ್​ ಸುಂದರ್​-ಸಾಹಿಬಾ ಬಾಲಿಯ ಡೇಟಿಂಗ್​ ಸುದ್ದಿ ಸಖತ್ ಸದ್ದು ಮಾಡ್ತಿದೆ. ಕ್ರಿಕೆಟ್​ ಫೀಲ್ಡ್​ನಿಂದ ಹೊರಗೆ ಬಂದ ಬಳಿಕ ಸಾರ್ವಜನಿಕವಾಗಿ ಎಲ್ಲೂ ಕಾಣಿಸಿಕೊಳ್ಳೋಕೆ ಇಷ್ಟ ಪಡದ ಸುಂದರ್​ ಗುಟ್ಟಾಗೇ ಸಾಹಿಬಾ ಬಾಲಿ ಜೊತೆಗೆ ಸುತ್ತಾಟ ನಡೆಸ್ತಿದ್ದಾರಂತೆ. ಸುಂದರ್​ ಆಪ್ತ ಮೂಲಗಳಿಂದಲೇ ಈ ಸುದ್ದಿ ಹೊರಬಿದ್ದಿದೆ. ಅಂದ್ಹಾಗೆ ಈ ಸಾಹಿಬಾ ಬಾಲಿ ಬಾಲಿವುಡ್​ನ ಆ್ಯಕ್ಟರ್​ & ಸ್ಪೋರ್ಟ್ಸ್​ ಪ್ರೆಸೆಂಟರ್​. ಸದ್ಯ ಐಸಿಸಿ, ಸ್ಟಾರ್​​ ಸ್ಪೋರ್ಟ್ಸ್​​ ಹಾಗೂ ಸೋನಿ ಸ್ಪೋರ್ಟ್ಸ್​​ ಚಾನೆಲ್​ಗಳ ಆ್ಯಂಕರ್​ ಆಗಿ ಕೆಲಸ ಮಾಡ್ತಿದ್ದಾರೆ. ಐಪಿಎಲ್​ನ ಪಂಜಾಬ್​ ಕಿಂಗ್ಸ್​ ತಂಡದ ಇನ್​​ಸೈಡರ್​ ಶೋನ ಹೋಸ್ಟ್​.

ಡೇಟಿಂಗ್​ ರೂಮರ್ಸ್

ಸಾಹಿಬಾ ಜೊತೆಗೆ ಸುಂದರ್​ ಹೆಸ್ರು ಕೇಳಿ ಬರ್ತಿರೋದು ಇದೇ ಮೊದಲೇನಲ್ಲ. ಇದೇ ವರ್ಷ ದುಬೈನಲ್ಲಿ ನಡೆದ ಚಾಂಪಿಯನ್ಸ್​ ಟ್ರೋಫಿ ವೇಳೆ ಇಬ್ಬರ ಹೆಸರು ಸಖತ್​ ಸದ್ದು ಮಾಡಿತ್ತು. ಟೂರ್ನಿಯ ವೇಳೆ ಕಾಫಿ ಶಾಪ್ ಒಂದರಲ್ಲಿ ಸುಂದರ್-ಸಾಹಿಬಾ ಜೊತೆಗೆ​ ಕಾಣಿಸಿಕೊಂಡಿದ್ರು. ಆ ವಿಡಿಯೋ ಸಖತ್​ ವೈರಲ್​ ಆಗಿತ್ತು ಮತ್ತು ಆಗಲೇ ಡೇಟಿಂಗ್​ ರೂಮರ್ಸ್​​ ಬಿರುಗಾಳಿಯಂತೆ ಹಬ್ಬಿತ್ತು.

ಟೆಸ್ಟ್​ ಸರಣಿಯ ವೇಳೆ ಪರಿಚಯ

ದುಬೈನಲ್ಲಿ ಸುತ್ತಾಟ ನಡೆಸಿದ್ದ ಈ ಜೋಡಿಯ ಪರಿಚಯವಾಗಿದ್ದು ಕಳೆದ ವರ್ಷದ ಬಾರ್ಡರ್​​-ಗವಾಸ್ಕರ್​ ಟೆಸ್ಟ್​ ಸರಣಿಯ ವೇಳೆ ಆಸ್ಟ್ರೇಲಿಯಾದಲ್ಲಿ. ಬಾರ್ಡರ್​​-ಗವಾಸ್ಕರ್​​ ಟೆಸ್ಟ್​ ಸರಣಿಯ ವೇಳೆ ಸುಂದರ್ ತಂಡದೊಂದಿಗಿದ್ರೆ, ಬ್ರಾಡ್​ಕಾಸ್ಟಿಂಗ್​ ಟೀಮ್​ ಜೊತೆಗೆ ಸಾಹಿಬಾ ಇದ್ರು. ಈ ಪ್ರವಾಸದ ವೇಳೆಯೇ ಇವರಿಬ್ಬರ ನಡುವೆ ಪರಿಚಯವಾಗಿ, ಸ್ನೇಹ ಶುರುವಾಗಿದ್ದು ಎಂಬ ಸುದ್ದಿಯಿದೆ. ಆ ಸ್ನೇಹವೇ ಇದೀಗ ಪ್ರೀತಿಯ ರೂಪ ಪಡೆದುಕೊಂಡಿದೆ ಎನ್ನಲಾಗ್ತಿದೆ.

ಬಾಲಿವುಡ್​ನಲ್ಲೂ ಸಂಚಲನ

ಸುಂದರ್​ ಮನಗೆದ್ದಿರೋ ಸಾಹಿಬಾ ಬಾಲಿವುಡ್​ನ ಅಂಗಳದಲ್ಲಿ ಬಾಕ್ಸ್​ ಆಫೀಸ್​ ಕೊಳ್ಳೆ ಹೊಡೆದ ಕಬೀರ್​ ಸಿಂಗ್​, ಸುಲ್ತಾನ್​ ಚಿತ್ರಗಳಲ್ಲಿ ಸಪೋರ್ಟಿಂಗ್​ ಕ್ಯಾರೆಕ್ಟರ್​ ಮಾಡಿದ್ರು. ಲೈಲಾ ಮಜ್ನು, ತಾನಾವ್, ಡಿಯರ್​ ಮಾಯಾ ಸೇರಿದಂತೆ ಹಲವು ಚಿತ್ರಗಳಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಹಲವು ಮ್ಯೂಸಿಕ್​ ಆಲ್ಬಂಗಳಲ್ಲಿಯೂ ಸಾಹಿಬಾ ಕಾಣಿಸಿಕೊಂಡಿದ್ದಾರೆ.

ಜರ್ನಿ ಸಖತ್​ ಇಂಟರೆಸ್ಟಿಂಗ್

ಈ ಸಾಹಿಬಾ ಬಾಲಿಯ ಜರ್ನಿ ಸಖತ್​ ಇಂಟರೆಸ್ಟಿಂಗ್​ ಆಗಿದೆ. ಈಕೆಗೆ ಆರಂಭದಲ್ಲಿ ಆಸಕ್ತಿ ಇದ್ದದ್ದು ಬ್ಯುಸಿನೆಸ್​ ಮೇಲೆ. ಹೀಗಾಗಿ ಡೆಲ್ಲಿ ಯುನಿವರ್ಸಿಟಿಯಲ್ಲಿ ಎಕಾನಾಮಿಕ್ಸ್​ ಡಿಗ್ರಿ ಪಡೆ ಸಾಹಿಬಾ, ಡರ್ಹಾಮ್​ ಯುನಿವರ್ಸಿಟಿ ಆಫ್​​ ಬ್ಯುಸಿನೆಸ್​ ಸ್ಕೂಲ್​ನಲ್ಲಿ ಮಾಸ್ಟರ್ಸ್​ ಡಿಗ್ರಿ ಕಂಪ್ಲೀಟ್ ಮಾಡಿದ್ದಾರೆ. ಆ ಬಳಿಕ ಜೋಮ್ಯಾಟೋ ಫುಡ್​ ಡಿಲೆವರಿ ಆ್ಯಪ್​ನಲ್ಲಿ ಬ್ರ್ಯಾಂಡ್​ ಮ್ಯಾನೇಜರ್​ ಆಗಿ ಕಾರ್ಯ ನಿರ್ವಹಿಸಿದ್ರು.

ಜೊಮ್ಯಾಟೋದಲ್ಲಿ ಕೆಲಸ

ಎರಡುವರೆ ವರ್ಷ ಜೊಮ್ಯಾಟೋದಲ್ಲಿ ಕೆಲಸ ಮಾಡಿದ ಸಾಹಿಬಾ ಬಾಲಿಗೆ ಅದೇನಾಯ್ತೋ ಗೊತ್ತಿಲ್ಲ. ಸಡನ್​ ಆಗಿ ಆ್ಯಕ್ಟಿಂಗ್​ ಮೇಲೆ ಇಂಟರೆಸ್ಟ್​ ಬಂದು ಕೆಲಸ ಬಿಟ್ಟು ಬಾಲಿವುಡ್​ ಅಂಗಳದಲ್ಲಿ ಅದೃಷ್ಟ ಪರೀಕ್ಷೆ ನಡೆಸಿದ್ರು. ಬಳಿಕ ಈಗ ಬಾಲಿವುಡ್​ನೂ ಬಿಟ್ಟು ಸ್ಪೋರ್ಟ್ಸ್​​ ಪ್ರೆಸೆಂಟರ್​ ಆಗಿ ಸ್ಪೋರ್ಟ್ಸ್​ ಚಾನೆಲ್​ ಸೇರಿದ್ದಾರೆ. ಸಾಹಿಬಾ ಬಾಲಿ ಮಾತ್ರವಲ್ಲ.. ತೆಲುಗು ನಟಿ ವರ್ಷಿನಿ ಸುಂದರಾಜನ್​ ಜೊತೆಗೂ ಸುಂದರ್​​ ಹೆಸ್ರು ತಳುಕು ಹಾಕಿಕೊಂಡಿತ್ತು. ಕಳೆದ ಸೀಸನ್​ನಲ್ಲಿ ಗುಜರಾತ್​ ಟೈಟನ್ಸ್​ ವಿರುದ್ಧದ ಪಂದ್ಯ ನೋಡೋಕೆ ಬಂದಿದ್ದಕ್ಕೆ ಹೀಗೊಂದು ಗಾಸಿಪ್​ ಹಬ್ಬಿತ್ತು.

ಎಲ್ಲರಿಗೂ ಸರ್​ಪ್ರೈಸ್​ ಶಾಕ್

ಕ್ರಿಕೆಟರ್ಸ್​ ಅಂಡ್ ಸ್ಪೋರ್ಟ್ಸ್​ ಪ್ರೆಸೆಂಟರ್​​ ಲವ್​ ಕತೆ ಹೊಸದೇನಲ್ಲ. ಗಪ್​ಚುಪ್​ ಆಗಿ ಲವ್​ ಮಾಡಿ ಹಸೆಮಣೆ ಏರಿದ ಜಸ್​ಪ್ರೀತ್​ ಬೂಮ್ರಾ – ಸಂಜನಾ ಗಣೇಶನ್ ಎಲ್ಲರಿಗೂ ಸರ್​ಪ್ರೈಸ್​ ಶಾಕ್​ ನೀಡಿದ್ರು. ಆ​ ಪ್ರೇಮ್​ ಕಹಾನಿಯೂ ಬಹುತೇಕ ಹೀಗೆ ಇತ್ತು. ಅದೇ ರೀತಿ ಇದೀಗ ಸುಂದರ್​-ಸಾಹಿಬಾ ಪ್ರೇಮಕಾವ್ಯ ಶುರುವಾದಂತಿದೆ.

Have any thoughts?

Share your reaction or leave a quick response — we’d love to hear what you think!

You may also like