ತಂದೆ ಮಗಳ ಬಾಂಧವ್ಯ ಸಾರುವ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತವೆ. ತಂದೆಗೆ ಕಷ್ಟ ಎಂದರೆ ಜತೆಗೆ ನಿಲ್ಲುವ ಮಗಳು ತನ್ನ ಪಾಲಿಗೆ ಪ್ರಪಂಚವಾಗಿರುತ್ತಾಳೆ. ಇಲ್ಲೊಬ್ಬಳು ಮಗಳು ತನ್ನ ತಂದೆಯನ್ನು ಕಳ್ಳನಿಂದ ಕಾಪಾಡಿದ್ದಾಳೆ. ಅಂಗಡಿಗೆ ಬಂದ ಕಳ್ಳನು ತನ್ನ ತಂದೆಗೆ ಹಿಗ್ಗಾಮುಗ್ಗಾ ಹೊಡೆದು ಹಣ ದೋಚಲು ಮುಂದಾಗಿದ್ದು, ಆದರೆ ಈ ಪುಟಾಣಿಯ ಮುಗ್ಧತೆಯೂ ಕಳ್ಳನ ಮನಸ್ಸನ್ನೇ ಬದಲಾಯಿಸಿದೆ. ಈ ಹೃದಯಸ್ಪರ್ಶಿ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ನೆಟ್ಟಿಗರ ಹೃದಯ ಗೆದ್ದಿದೆ.

ಪುಟಾಣಿಗಳು (Little kids) ಏನು ಮಾಡಿದ್ರು ಕೂಡ ಚೆಂದನೇ. ಈ ಪುಟಾಣಿಗಳು ಗೊತ್ತಿಲ್ಲದೇ ಮಾಡುವ ಮುಗ್ಧ ಕೆಲಸಗಳನ್ನು ಕಂಡಾಗ ಅಪ್ಪಿ ಮುದ್ದಾಡಬೇಕು ಎನಿಸುತ್ತದೆ. ಅಂಗಡಿ ನುಗ್ಗಿದ ಕಳ್ಳನು (thief) ಕೂಡ ಪುಟಾಣಿಯನ್ನು ಅಪ್ಪಿ ಮುದ್ದಾಡಿದ್ದಾನೆ. ಕಳ್ಳರು ಈ ರೀತಿನೂ ಇರ್ತಾರಾ ಎಂದೆನಿಸಬಹುದು. ಇದಕ್ಕೆ ಕಾರಣವಾಗಿದ್ದು ಈ ಪುಟಾಣಿಯ ಮುಗ್ಧತೆ. ಕಳ್ಳನೊಬ್ಬನು ಅಂಗಡಿಗೆ ನುಗ್ಗುತ್ತಿದ್ದಂತೆ ಪುಟಾಣಿಯೂ ತನ್ನ ತಂದೆಯೊಂದಿಗೆ ಕುಳಿತು ಆತ ಏನು ಮಾಡುತ್ತಿರುವುದನ್ನು ನೋಡಿದ್ದಾಳೆ. ಈ ಪುಟಾಣಿಯ ತಂದೆ ಅಸಹಾಯಕ ಸ್ಥಿತಿಯಲ್ಲಿದ್ದು ತನ್ನ ಕೈಯಲ್ಲಿದ್ದ ಹಣವೆಲ್ಲವನ್ನೂ ಕಳ್ಳನ ಮುಂದೆ ಇಟ್ಟಿದ್ದಾನೆ. ಇದನ್ನೇ ನೋಡುತ್ತಿದ್ದ ಪುಟಾಣಿ ಮಾಡಿದ ಕೆಲಸದಿಂದ ದೋಚಿದ್ದ ಹಣವನ್ನು ಬಿಟ್ಟು ವಾಪಸ್ಸು ಹೋಗಲು ಮುಂದಾಗಿದ್ದಾನೆ. ಅಷ್ಟಕ್ಕೂ ಆಗಿದ್ದೇನು ಎನ್ನುವ ಪ್ರಶ್ನೆ ನಿಮ್ಮ ಮನಸ್ಸಿನಲ್ಲಿ ಮೂಡಬಹುದು. ಇದಕ್ಕೆ ಉತ್ತರ ಇಲ್ಲಿದೆ.
Abbottabad ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ತನ್ನ ತಂದೆಯೊಂದಿಗೆ ಅಂಗಡಿಯ ಕುರ್ಚಿಯನ್ನು ಕುಳಿತುಕೊಂಡಿದ್ದಾಳೆ. ಅಂಗಡಿಯೊಳಗೆ ಮಾಸ್ಕ್ ಹಾಕಿಕೊಂಡು ಕಳ್ಳನೊಬ್ಬನು ನುಗ್ಗುತ್ತಾನೆ. ಡ್ರಾಯರ್ನಲ್ಲಿದ್ದ ದುಡ್ಡು ಕೊಡುವಂತೆ ಹೊಡೆದು ವ್ಯಕ್ತಿಗೆ ಬೆದರಿಕೆ ಹಾಕುತ್ತಾನೆ. ಈ ವೇಳೆಯಲ್ಲಿ ಅಂಗಡಿ ಮಾಲಿಕ ಡ್ರಾಯರ್ನಲ್ಲಿದ್ದ ದುಡ್ಡನ್ನೆಲ್ಲಾ ಕೊಡುತ್ತಾನೆ. ತನ್ನ ತಂದೆಯನ್ನು ಹೊಡೆಯುವುದನ್ನು ಪುಟಾಣಿಯೂ ಗಮನಿಸಿದ್ದಾಳೆ. ಅಪ್ಪನು ಕಳ್ಳನಿಗೆ ಕೊಡುತ್ತಿದ್ದಂತೆ ತಾನು ತನ್ನ ಕೈಯಲ್ಲಿದ್ದ ಲಾಲಿಪಾಪ್ ಕಳ್ಳನಿಗೆ ನೀಡುತ್ತಾಳೆ. ಈ ಪುಟಾಣಿ ಮಾಡಿದ ಕೆಲಸ ನೋಡಿದ ಕಳ್ಳನು ಮನಸ್ಸೇ ಬದಲಾಗಿದೆ. ಅಂಗಡಿ ಮಾಲೀಕನಿಂದ ಕಸಿದುಕೊಂಡ ದುಡ್ಡನ್ನು ಟೇಬಲ್ ಮೇಲಿಟ್ಟು ಈ ಪುಟಾಣಿಗೆ ಮುತ್ತು ಕೊಟ್ಟು ಕಳ್ಳನು ಅಲ್ಲಿಂದ ಹೋಗುವುದನ್ನು ನೋಡಬಹುದು.
Have any thoughts?
Share your reaction or leave a quick response — we’d love to hear what you think!