Home FinanceGold Rate Today Bangalore: ಚಿನ್ನದ ಬೆಲೆ ಏರಿಕೆ; ಬೆಳ್ಳಿ ಬೆಲೆ ಸೂಪರ್ ಜಿಗಿತ

Gold Rate Today Bangalore: ಚಿನ್ನದ ಬೆಲೆ ಏರಿಕೆ; ಬೆಳ್ಳಿ ಬೆಲೆ ಸೂಪರ್ ಜಿಗಿತ

by shiv
0 comments

Bullion Market 2025 November 13th: ಚಿನ್ನ ಮತ್ತು ಬೆಳ್ಳಿ ಬೆಲೆಗಳು ಇಂದು ಗುರುವಾರ ಏರಿಕೆ ಆಗಿವೆ. ಬೆಳ್ಳಿ ಬೆಲೆಯಂತೂ ಒಂದೇ ದಿನದಲ್ಲಿ ಗ್ರಾಮ್​ಗೆ 10 ರೂ ಜಿಗಿದಿದೆ. 22 ಕ್ಯಾರಟ್ ಚಿನ್ನದ ಬೆಲೆ 11,505 ರೂನಿಂದ 11,715 ರೂಗೆ ಏರಿದೆ. 24 ಕ್ಯಾರಟ್ ಚಿನ್ನದ ಬೆಲೆ 12,780 ರೂಗೆ ಏರಿದೆ. ಬೆಳ್ಳಿ ಬೆಲೆ ಮುಂಬೈ, ಬೆಂಗಳೂರು ಮೊದಲಾದೆಡೆ 162 ರೂನಿಂದ 172 ರೂಗೆ ಏರಿದೆ. ಚೆನ್ನೈ ಮೊದಲಾದೆಡೆ ಬೆಲೆ 182 ರೂಗೆ ಏರಿದೆ.

ಬೆಂಗಳೂರು, ನವೆಂಬರ್ 13: ಬೆಳ್ಳಿ ಬೆಲೆಯ ಸತತ ಏರಿಕೆ ಮುಂದುವರಿದಿದೆ. ಇಂದು ಒಂದೇ ದಿನಕ್ಕೆ 10 ರೂ ಜಿಗಿತ ಕಂಡಿದೆ. ನಿನ್ನೆ ಇದರ ಬೆಲೆ 2 ರೂ ಹೆಚ್ಚಿತ್ತು. ಚಿನ್ನದ ಬೆಲೆಯೂ (gold rate) ಕೂಡ ಏರಿಕೆಯ ಹಾದಿಗೆ ಮರಳಿದೆ. ಗುರುವಾರ ಚಿನ್ನದ ಬೆಲೆಯಲ್ಲಿ 210 ರೂಗಳಷ್ಟು ಹೆಚ್ಚಳ ಆಗಿದೆ. ಆಭರಣ ಚಿನ್ನದ ಬೆಲೆ 11,700 ರೂ ಗಡಿದಾಟಿದೆ. ಅಪರಂಜಿ ಚಿನ್ನ 12,800 ರೂ ಗಡಿ ಸಮೀಪಕ್ಕೆ ಹೋಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,17,150 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,27,800 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 17,200 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,17,150 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 17,200 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 18,200 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ನವೆಂಬರ್ 13ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 12,780 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 11,715 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 9,585 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 172 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 12,780 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 11,715 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 172 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 11,715 ರೂ
  • ಚೆನ್ನೈ: 11,800 ರೂ
  • ಮುಂಬೈ: 11,715 ರೂ
  • ದೆಹಲಿ: 11,730 ರೂ
  • ಕೋಲ್ಕತಾ: 11,715 ರೂ
  • ಕೇರಳ: 11,715 ರೂ
  • ಅಹ್ಮದಾಬಾದ್: 11,720 ರೂ
  • ಜೈಪುರ್: 11,730 ರೂ
  • ಲಕ್ನೋ: 11,730 ರೂ
  • ಭುವನೇಶ್ವರ್: 11,715 ರೂ

 

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಮಲೇಷ್ಯಾ: 540 ರಿಂಗಿಟ್ (11,593 ರುಪಾಯಿ)
  • ದುಬೈ: 467 ಡಿರಾಮ್ (11,276 ರುಪಾಯಿ)
  • ಅಮೆರಿಕ: 130 ಡಾಲರ್ (11,529 ರುಪಾಯಿ)
  • ಸಿಂಗಾಪುರ: 167.60 ಸಿಂಗಾಪುರ್ ಡಾಲರ್ (11,421 ರುಪಾಯಿ)
  • ಕತಾರ್: 465.50 ಕತಾರಿ ರಿಯಾಲ್ (11,325 ರೂ)
  • ಸೌದಿ ಅರೇಬಿಯಾ: 475 ಸೌದಿ ರಿಯಾಲ್ (11,232 ರುಪಾಯಿ)
  • ಓಮನ್: 49.20 ಒಮಾನಿ ರಿಯಾಲ್ (11,333 ರುಪಾಯಿ)
  • ಕುವೇತ್: 38.20 ಕುವೇತಿ ದಿನಾರ್ (11,030 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 172 ರೂ
  • ಚೆನ್ನೈ: 182 ರೂ
  • ಮುಂಬೈ: 172 ರೂ
  • ದೆಹಲಿ: 172 ರೂ
  • ಕೋಲ್ಕತಾ: 172 ರೂ
  • ಕೇರಳ: 182 ರೂ
  • ಅಹ್ಮದಾಬಾದ್: 172 ರೂ
  • ಜೈಪುರ್: 172 ರೂ
  • ಲಕ್ನೋ: 172 ರೂ
  • ಭುವನೇಶ್ವರ್: 182 ರೂ
  • ಪುಣೆ: 172

 

Have any thoughts?

Share your reaction or leave a quick response — we’d love to hear what you think!

You may also like