Home FinanceGold Rate Today Bangalore: ಚಿನ್ನದ ಬೆಲೆ 70 ರೂ ಇಳಿಕೆ; ಬೆಳ್ಳಿ ಬೆಲೆ 2 ರೂ ಏರಿಕೆ

Gold Rate Today Bangalore: ಚಿನ್ನದ ಬೆಲೆ 70 ರೂ ಇಳಿಕೆ; ಬೆಳ್ಳಿ ಬೆಲೆ 2 ರೂ ಏರಿಕೆ

by shiv
0 comments

Bullion Market 2025 November 12th: ಇಂದು ಬುಧವಾರ ಚಿನ್ನದ ಬೆಲೆ ಇಳಿಕೆ ಕಂಡರೆ, ಬೆಳ್ಳಿ ಬೆಲೆಯಲ್ಲಿ ಏರಿಕೆ ಮುಂದುವರಿದಿದೆ. ಆಭರಣ ಚಿನ್ನದ ಬೆಲೆ 11,575 ರೂ ಇದ್ದದ್ದು 11,505 ರೂಗೆ ಇಳಿದಿದೆ. ಅಪರಂಜಿ ಚಿನ್ನದ ಬೆಲೆ 12,551 ರೂಗೆ ಇಳಿದಿದೆ. ಬೆಳ್ಳಿ ಬೆಲೆ ಮುಂಬೈ, ಬೆಂಗಳೂರು ಮೊದಲಾದೆಡೆ 162 ರೂಗೆ ಏರಿದೆ. ಚೆನ್ನೈ ಮೊದಲಾದೆಡೆ ಬೆಲೆ 173 ರೂಗೆ ಏರಿದೆ.

ಬೆಂಗಳೂರು, ನವೆಂಬರ್ 12: ಎರಡು ದಿನ ಸತತ ಏರಿಕೆಯಾಗಿದ್ದ ಚಿನ್ನದ ಬೆಲೆ (gold rate) ಇವತ್ತು ಗ್ರಾಮ್​ಗೆ 70 ರೂನಷ್ಟು ಕಡಿಮೆ ಆಗಿದೆ. ಅಪರಂಜಿ ಚಿನ್ನದ ಬೆಲೆ 12,600 ರೂ ಮಟ್ಟಕ್ಕಿಂತ ಕೆಳಗೆ ಇಳಿದಿದೆ. ವಿದೇಶಗಳಲ್ಲೂ ಹೆಚ್ಚಿನ ಕಡೆ ಚಿನ್ನದ ಬೆಲೆ ಸ್ವಲ್ಪ ತಗ್ಗಿದೆ. ಕೆಲವೆಡೆ ಮಾತ್ರ ಏರಿಕೆ ಆಗಿದೆ. ಆದರೆ, ಬೆಳ್ಳಿ ಬೆಲೆ ಏರಿಕೆ ಮುಂದುವರಿದಿದೆ. ಇಂದು ಇದರ ಬೆಲೆ 2 ರೂನಷ್ಟು ಹೆಚ್ಚಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,15,050 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,25,510 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 16,200 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,15,050 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 16,200 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 17,300 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ನವೆಂಬರ್ 12ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 12,551 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 11,505 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 9,413 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 162 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 12,551 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 11,505 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 162 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 11,505 ರೂ
  • ಚೆನ್ನೈ: 11,600 ರೂ
  • ಮುಂಬೈ: 11,505 ರೂ
  • ದೆಹಲಿ: 11,520 ರೂ
  • ಕೋಲ್ಕತಾ: 11,505 ರೂ
  • ಕೇರಳ: 11,505 ರೂ
  • ಅಹ್ಮದಾಬಾದ್: 11,510 ರೂ
  • ಜೈಪುರ್: 11,520 ರೂ
  • ಲಕ್ನೋ: 11,520 ರೂ
  • ಭುವನೇಶ್ವರ್: 11,505 ರೂ

    ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

    • ಮಲೇಷ್ಯಾ: 532 ರಿಂಗಿಟ್ (11,407 ರುಪಾಯಿ)
    • ದುಬೈ: 458.70 ಡಿರಾಮ್ (11,039 ರುಪಾಯಿ)
    • ಅಮೆರಿಕ: 128 ಡಾಲರ್ (11,343 ರುಪಾಯಿ)
    • ಸಿಂಗಾಪುರ: 167.60 ಸಿಂಗಾಪುರ್ ಡಾಲರ್ (11,392 ರುಪಾಯಿ)
    • ಕತಾರ್: 459.50 ಕತಾರಿ ರಿಯಾಲ್ (11,171 ರೂ)
    • ಸೌದಿ ಅರೇಬಿಯಾ: 468 ಸೌದಿ ರಿಯಾಲ್ (11,058 ರುಪಾಯಿ)
    • ಓಮನ್: 48.65 ಒಮಾನಿ ರಿಯಾಲ್ (11,198 ರುಪಾಯಿ)
    • ಕುವೇತ್: 37.81 ಕುವೇತಿ ದಿನಾರ್ (10,908 ರುಪಾಯಿ)

    ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

    • ಬೆಂಗಳೂರು: 162 ರೂ
    • ಚೆನ್ನೈ: 173 ರೂ
    • ಮುಂಬೈ: 162 ರೂ
    • ದೆಹಲಿ: 162 ರೂ
    • ಕೋಲ್ಕತಾ: 162 ರೂ
    • ಕೇರಳ: 173 ರೂ
    • ಅಹ್ಮದಾಬಾದ್: 162 ರೂ
    • ಜೈಪುರ್: 162 ರೂ
    • ಲಕ್ನೋ: 162 ರೂ
    • ಭುವನೇಶ್ವರ್: 173 ರೂ
    • ಪುಣೆ: 162

Have any thoughts?

Share your reaction or leave a quick response — we’d love to hear what you think!

You may also like