ಐಪಿಎಲ್ ಆಟಗಾರರ ರಿಟೆನ್ಶನ್ ಭಾರೀ ಕುತೂಹಲ ಕೆರಳಿಸಿದೆ. ತೆರೆ ಹಿಂದೆ ಆಟಗಾರರ ರೀಟೇನ್ ಮತ್ತು ರಿಲೀಸ್ ಪ್ಲಾನ್ ಮಾಡಿಕೊಳ್ಳುತ್ತಿರುವ ಫ್ರಾಂಚೈಸಿಗಳು, ಸೀಕ್ರೆಟ್ ಆಗೇ ಕೆಲಸ ಮಾಡುತ್ತಿವೆ.

ಐಪಿಎಲ್ ಆಟಗಾರರ ರಿಟೆನ್ಶನ್ ಭಾರೀ ಕುತೂಹಲ ಕೆರಳಿಸಿದೆ. ತೆರೆ ಹಿಂದೆ ಆಟಗಾರರ ರೀಟೇನ್ ಮತ್ತು ರಿಲೀಸ್ ಪ್ಲಾನ್ ಮಾಡಿಕೊಳ್ಳುತ್ತಿರುವ ಫ್ರಾಂಚೈಸಿಗಳು, ಸೀಕ್ರೆಟ್ ಆಗೇ ಕೆಲಸ ಮಾಡುತ್ತಿವೆ. ಡೆಡ್ಲೈನ್ಗೆ ಇನ್ನು ಕೇವಲ ನಾಲ್ಕೇ ನಾಲ್ಕು ದಿನಗಳು ಮಾತ್ರ ಬಾಕಿ ಉಳಿದಿದೆ. ಆದ್ರೂ ಫ್ರಾಂಚೈಸಿಗಳು ಕ್ಲೋಸ್ಡ್ ಡೋರ್ ಹಿಂದೆನೇ ಚಟುವಟಿಕೆಗಳಲ್ಲಿ ಬ್ಯೂಸಿಯಾಗಿವೆ.
ಐಪಿಎಲ್ ಸೀಸನ್-19 ಹರಾಜಿಗೂ ಮುನ್ನ ಪ್ಲೇಯರ್ಸ್ ರಿಟೆನ್ಶನ್, ಫ್ರಾಂಚೈಸಿಗಳಿಗೆ ಪ್ರತಿಷ್ಟೆಯ ಕಣವಾಗಿದೆ. ಆಟಗಾರರ ರಿಟೆನ್ಶನ್ ಅಥವಾ ರಿಲೀಸ್ ವಿಚಾರದಲ್ಲಿ ಫ್ರಾಂಚೈಸಿ ಒಂದೇ ಒಂದು ಯಡವಟ್ಟು ಮಾಡಿದ್ರೂ ಸೀಸನ್ ಉದ್ದಕ್ಕೂ ಅದು ಇನ್ನಿಲ್ಲದಂತೆ ಕಾಡಲಿದೆ. ಹಾಗಾಗಿ ಹಗಲು ರಾತ್ರಿ ಎನ್ನದೇ ಫ್ರಾಂಚೈಸಿ ಮಾಲೀಕರು, ಆಟಗಾರರನ್ನ ಎಚ್ಚರಿಕೆಯಿಂದಲೇ ರೀಟೇನ್ ಮತ್ತು ರಿಲೀಸ್ ಮಾಡ್ತಿದ್ದಾರೆ. ಹಾಗೆ ಸಾರಥಿಯ ಆಯ್ಕೆಯಲ್ಲೂ, ಜಾಣ್ಮೆಯ ನಡೆ ಅನುಸರಿಸುತ್ತಿದ್ದಾರೆ.
ನಾಯಕ ಯಾರು..?
ರಾಜಸ್ಥಾನ್ ರಾಯಲ್ ತಂಡದ ನಾಯಕ ಸಂಜು ಸ್ಯಾಮ್ಸನ್, ತಂಡವನ್ನ ಬಿಡಲು ಧೃಡ ನಿರ್ಧಾರ ಮಾಡಿದ್ದಾರೆ. ಸದ್ಯ ಟ್ರೇಡ್ ಮೂಲಕ ವ್ಯವಹಾರ ನಡೆಸ್ತಿರುವ ಸಂಜು ಬದಲಿಗೆ ಆರ್ಆರ್, ನೂತನ ನಾಯಕನ ಆಯ್ಕೆಯಲ್ಲಿ ಬ್ಯೂಸಿಯಾಗಿದೆ. ರಾಜಸ್ಥಾನ್ ಮುಂದೆ 3 ಆಪ್ಶನ್ಗಳಿವೆ. ರಿಯಾನ್ ಪರಾಗ್, ಯಶಸ್ವಿ ಜೈಸ್ವಾಲ್ ಮತ್ತು ಧೃವ್ ಜುರೆಲ್, ಈ ಮೂವರು ಯುವ ಕ್ರಿಕೆಟಿಗರಲ್ಲಿ ಒಬ್ಬನನ್ನ ಆರ್ಆರ್ ಸಾರಥಿಯಾಗಿ ನೇಮಕ ಮಾಡಬೇಕಿದೆ.
ಶಮಿಗೆ ಸಿಎಸ್ಕೆ ಗಾಳ?
ಚೆನ್ನೈ ಸೂಪರ್ಕಿಂಗ್ಸ್ ಇರೋ ಬರೋ ಆಟಗಾರರನ್ನೆಲ್ಲಾ ತಂಡಕ್ಕೆ ಸೆಳೆಯಲು ಮುಂದಾಗಿದೆ. ಒಂದೆಡೆ ಸಂಜು ಸ್ಯಾಮ್ಸನ್ಗೆ ಗಾಳ ಹಾಕಿರುವ ಸಿಎಸ್ಕೆ, ಜೊತೆಯಲ್ಲೇ ಕೆ.ಎಲ್.ರಾಹುಲ್, ಇಶಾನ್ ಕಿಶನ್ ಮತ್ತಿತರೆ ಆಟಗಾರರ ಮೇಲೂ ಕಣ್ಣಿಟ್ಟಿದೆ. ಲೇಟೆಸ್ಟ್ ವಿಚಾರ ಏನಪ್ಪಾ ಅಂದ್ರೆ ಚೆನ್ನೈ, ಹಿರಿಯ ಮತ್ತು ಅನುಭವಿ ವೇಗಿ ಮೊಹಮ್ಮದ್ ಶಮಿಯನ್ನ ತಂಡಕ್ಕೆ ಕರೆತರಲು ಪ್ಲಾನ್ ಮಾಡಿಕೊಂಡಿದಿಯಂತೆ. ಆದ್ರೆ ಇದು ಎಷ್ಟು ನಿಜ ಅನ್ನೋದೇ, ಸದ್ಯಕ್ಕೆ ಎಲ್ಲರಿಗೂ ಕಾಡ್ತಿರೋ ಪ್ರಶ್ನೆ.
ಸನ್ರೈಸರ್ಸ್ ಹೈದ್ರಾಬಾದ್ ತಂಡ, ಬಿಗ್ ಸ್ಟಾರ್ಗಳನ್ನ ರಿಲೀಸ್ ಮಾಡುವ ಸುದ್ದಿ ಬಿರುಗಾಳಿಯಂತೆ ಬೀಸಿತ್ತು. ಅದ್ರಲ್ಲೂ ಪ್ರಮುಖವಾಗಿ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಇಶಾನ್ ಕಿಶನ್ ಮತ್ತು ಬಿಗ್ ಹಿಟ್ಟರ್ ಹೆನ್ರಿಚ್ ಕ್ಲಾಸನ್ರನ್ನ ಎಸ್ಆರ್ಹೆಚ್ ತಂಡದಿಂದ ರಿಲೀಸ್ ಮಾಡ್ತಾರೆ ಅನ್ನೋದು ಎಲ್ಲೆಡೆ ಹಬ್ಬಿತ್ತು. ಆದ್ರೀಗ ಹೈದ್ರಾಬಾದ್ ಫ್ರಾಂಚೈಸಿ, ಇಶಾನ್ ಕಿಶನ್ ಮತ್ತು ಹೆನ್ರಿಚ್ ಕ್ಲಾಸನ್ ತಂಡದಲ್ಲೇ ಉಳಿಯಲಿದ್ದಾರೆ ಅನ್ನೋದನ್ನ ಸ್ಪಷ್ಟಪಡಿಸಿದೆ.
ಯಾರಿಗೆ ಅದೃಷ್ಟ..?
ಈ ಬಾರಿ ಹರಾಜಿನಲ್ಲಿ ಫ್ರಾಂಚೈಸಿಗಳು ಬಿಗ್ಸ್ಟಾರ್ಗಳನ್ನೇ ರಿಲೀಸ್ ಮಾಡುತ್ತೆ ಅನ್ನೋದು ತಿಳಿದು ಬಂದಿದೆ. ದಕ್ಷಿಣ ಆಫ್ರಿಕಾದ ಮಾರ್ಕೊ ಯಾನ್ಸನ್, ಟ್ರಿಸ್ಟನ್ ಸ್ಟಬ್ಸ್, ಡೇವಿಡ್ ಮಿಲ್ಲರ್, ಕ್ವಿಂಟನ್ ಡಿಕಾಕ್, ಆಸ್ಟ್ರೇಲಿಯಾದ ಗ್ಲೇನ್ ಮ್ಯಾಕ್ಸ್ವೆಲ್, ಇಂಗ್ಲೆಂಡ್ನ ಲಿವಿಂಗ್ ಸ್ಟೋನ್, ಭಾರತದ ವೆಂಕಟೇಶ್ ಅಯ್ಯರ್ ಎಲ್ಲರೂ ಹರಾಜಿಗೆ ಹೋಗೋದು ಬಹುತೇಕ ಫಿಕ್ಸ್. ಆದ್ರೆ ಹರಾಜಿನಲ್ಲಿ ಯಾರಿಗೆ ಲಕ್ ಕುಲಾಯಿಸುತ್ತೋ ನೋಡಬೇಕು.
ಡಿಸೆಂಬರ್ನಲ್ಲಿ ನಡೆಯಲಿರೋ ಮಿನಿ ಹರಾಜಿನಲ್ಲಿ, ಫ್ರಾಂಚೈಸಿ ಮಾಲೀಕರು ಲೆಕ್ಕಾಚಾರದೊಂದಿಗೆ ಬಿಡ್ಡಿಂಗ್ ಮಾಡಲಿದ್ದಾರೆ. ಈ ಬಾರಿ ಹರಾಜಿನಲ್ಲಿ ಭಾರತೀಯ ಆಟಗಾರರಿಗೆ ಹೆಚ್ಚು ಡಿಮ್ಯಾಂಡ್ ಅಂತ ಹೇಳಲಾಗ್ತಿದೆ. ಫ್ರಾಂಚೈಸಿ ಮಾಲೀಕರು ಭಾರತೀಯ ಆಟಗಾರರ ಮೇಲೆ ಹೆಚ್ಚು ಒಲವು ತೋರಿಸ್ತಿದ್ದಾರೆ. ಇಂಡಿಯನ್ ಕಂಡೀಷನ್ನಲ್ಲಿ ಪರ್ಫಾಮ್ ಮಾಡೋ ಆಟಗಾರರನ್ನ ತಂಡಕ್ಕೆ ಕರೆತರಲು ಸ್ಕೆಚ್ ಆಗ್ತಿದ್ದಾರೆ.
ಐಪಿಎಲ್ ರಿಟೆನ್ಶನ್ಗೆ ಬೆರಳೆಣಿಕೆಯಷ್ಟು ದಿನಗಳು ಮಾತ್ರ ಬಾಕಿ ಉಳಿದಿದೆ. ನವೆಂಬರ್ 15ಕ್ಕೂ ಮುನ್ನ ಆಟಗಾರರ ರಿಟೆನ್ಶನ್ ಮತ್ತು ರಿಲೀಸ್ ವಿಚಾರದಲ್ಲಿ ದಿನಕ್ಕೊಂದು ಬೆಳವಣಿಗೆ ಆಗ್ತಿದ್ದು, ಕ್ರಿಕೆಟ್ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗ್ತಿದೆ.
Have any thoughts?
Share your reaction or leave a quick response — we’d love to hear what you think!