IPL 2026: ಈ ಬಾರಿಯ ಐಪಿಎಲ್ನಲ್ಲಿ ಆರ್ಸಿಬಿ ಪರ 22 ಆಟಗಾರರು ಕಾಣಿಸಿಕೊಂಡಿದ್ದರು. ಈ 22 ಆಟಗಾರರಲ್ಲಿ ಬಹುತೇಕ ಪ್ಲೇಯರ್ಸ್ ಮುಂದಿನ ಸೀಸನ್ನಲ್ಲೂ ಮುಂದುವರೆಯುವ ಸಾಧ್ಯತೆಯಿದೆ. ಏಕೆಂದರೆ ಈ ಬಾರಿ ಆರ್ಸಿಬಿ ಪರ ಕಣಕ್ಕಿಳಿದ ಬಹುತೇಕ ಆಟಗಾರರು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಹೀಗಾಗಿ ಐಪಿಎಲ್ 2026 ರ ಮಿನಿ ಹರಾಜಿಗೂ ಮುನ್ನ ಆರ್ಸಿಬಿ ಕೆಲವೇ ಕೆಲವು ಆಟಗಾರರನ್ನು ಮಾತ್ರ ರಿಲೀಸ್ ಮಾಡಲಿದೆ.

ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-18 ರಲ್ಲಿ (IPL 2025) ಚಾಂಪಿಯನ್ ಪಟ್ಟ ಅಲಂಕರಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಮುಂದಿನ ಸೀಸನ್ಗೂ ಮುನ್ನ ಬಹುತೇಕ ಆಟಗಾರರನ್ನು ತಂಡದಲ್ಲೇ ಉಳಿಸಿಕೊಳ್ಳುವುದು ಖಚಿತ. ಇದಾಗ್ಯೂ ಆರ್ಸಿಬಿ ತಂಡಕ್ಕೆ ಇಬ್ಬರು ಆಟಗಾರರನ್ನು ರಿಟೈನ್ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ.ಐಪಿಎಲ್ ನಿಯಮದ ಪ್ರಕಾರ, ಬದಲಿ ಆಟಗಾರನಾಗಿ ಬಂದ ಪ್ಲೇಯರ್ಸ್ನನ್ನು ಮುಂದಿನ ಸೀಸನ್ಗೆ ರಿಟೈನ್ ಮಾಡಿಕೊಳ್ಳಬಹುದು. ಆದರೆ ತಾತ್ಕಾಲಿಕ ಬದಲಿಯಾಗಿ ಆಯ್ಕೆಯಾದ ಆಟಗಾರರನ್ನು ತಂಡದಲ್ಲೇ ಉಳಿಸಿಕೊಳ್ಳಲು ಅವಕಾವಿರುವುದಿಲ್ಲ.
ಆರ್ಸಿಬಿ ತಂಡಕ್ಕೆ ತಾತ್ಕಾಲಿಕ ಬದಲಿಯಾಗಿ ಇಬ್ಬರು ಆಟಗಾರರು ಎಂಟ್ರಿ ಕೊಟ್ಟಿದ್ದರು. ಭಾರತ-ಪಾಕ್ ಯುದ್ಧ ಭೀತಿ ಹಿನ್ನಲೆ ಐಪಿಎಲ್ 2025 ಅನ್ನು ಕೆಲ ವಾರ ಮುಂದೂಡಲಾಗಿತ್ತು. ಹೀಗಾಗಿ ಅಂತಿಮ ಪಂದ್ಯಗಳಿಗೆ ಜೇಕಬ್ ಬೆಥೆಲ್ ಹಾಗೂ ಲುಂಗಿ ಎನ್ಗಿಡಿ ಅಲಭ್ಯರಾಗಿದ್ದರು. ಇದೇ ವೇಳೆ ಆರ್ಸಿಬಿ ಇಬ್ಬರನ್ನು ತಾತ್ಕಾಲಿಕ ಬದಲಿಯಾಗಿ ಆಯ್ಕೆ ಮಾಡಿಕೊಂಡಿದ್ದರು. ಅವರೆಂದರೆ…ಬ್ಲೆಸಿಂಗ್ ಮುಝರಬಾನಿ: ಝಿಂಬಾಬ್ವೆ ವೇಗಿ ಬ್ಲೆಸಿಂಗ್ ಮುಝರಬಾನಿ ಆರ್ಸಿಬಿಯ ಕೊನೆಯ ಎರಡು ಪಂದ್ಯಗಳ ವೇಳೆ ತಂಡದಲ್ಲಿ ಕಾಣಿಸಿಕೊಂಡಿದ್ದರು. ಲುಂಗಿ ಎನ್ಗಿಡಿ ಅವರ ಬದಲಿಗೆ ಆಯ್ಕೆಯಾಗಿದ್ದ ಬ್ಲೆಸಿಂಗ್ ಮುಝರಬಾನಿಯನ್ನು ಮುಂದಿನ ಸೀಸನ್ಗಾಗಿ ರಿಟೈನ್ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಏಕೆಂದರೆ ಮುಝರಬಾನಿ ಆರ್ಸಿಬಿ ತಾತ್ಕಾಲಿಕ ಬದಲಿ ಆಟಗಾರನಾಗಿ ಎಂಟ್ರಿ ಕೊಟ್ಟಿದ್ದರು.
ಟಿಮ್ ಸೈಫರ್ಟ್: ಜೇಕಬ್ ಬೆಥೆಲ್ ತವರಿಗೆ ಹಿಂತಿರುಗಿದ ಕಾರಣ ಆರ್ಸಿಬಿ ನ್ಯೂಝಿಲೆಂಡ್ನ ವಿಕೆಟ್ ಕೀಪರ್ ಟಿಮ್ ಸೈಫರ್ಟ್ ಅವರನ್ನು ಬದಲಿಯಾಗಿ ಆಯ್ಕೆ ಮಾಡಿಕೊಂಡಿತ್ತು. ಆದರೆ ತಾತ್ಕಾಲಿಕ ಬದಲಿ ಆಟಗಾರನಾಗಿ ಆಯ್ಕೆಯಾಗಿರುವ ಸೈಫರ್ಟ್ ಅವರನ್ನು ಮುಂದಿನ ಸೀಸನ್ಗಾಗಿ ಆರ್ಸಿಬಿ ರಿಟೈನ್ ಮಾಡಿಕೊಳ್ಳುವಂತಿಲ್ಲ. ಹೀಗಾಗಿ ಈ ಇಬ್ಬರು ಆಟಗಾರರು ಆರ್ಸಿಬಿ ತಂಡದ ರಿಟೈನ್ ಪಟ್ಟಿಯಲ್ಲಿ ಸ್ಥಾನ ಪಡೆಯುವುದಿಲ್ಲ.
Have any thoughts?
Share your reaction or leave a quick response — we’d love to hear what you think!